ನಂಜನಗೂಡು: ತಾಂಡವಪುರ ಬಳಿ ಇರುವ ಮಹಾರಾಜ ತಾಂತ್ರಿಕ ಕಾಲೇಜಿನಲ್ಲಿ ಮಂಗಳವಾರ ಮಹಾರಾಜ ತಾಂತ್ರಿಕ ಕಾಲೇಜು ಮತ್ತು ಕಾಮೆಡ್-ಕೆ ಸಹಯೋಗದೊಂದಿಗೆ ಪ್ರಥಮ ವರ್ಷದ ಇಂಜಿನಿಯರ್ ವಿದ್ಯಾರ್ಥಿಗಳಿಂದ ತಾಂತ್ರಿಕ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.
ಕಂಪ್ಯೂಟರ್ ಸೈನ್ಸ್, ಸಿವಿಲ್ ಇಂಜಿನಿಯರಿಂಗ್, ಸಿಇಸಿ, ಮೆಕಾನಿಕಲ್ ಇಂಜಿನಿಯರಿಂಗ್‌ನ ಪ್ರಥಮ ವರ್ಷದ ಸುಮಾರು 360 ವಿದ್ಯಾರ್ಥಿಗಳಿಂದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳಿಗೆ ತಾಂತ್ರಿಕ ಪ್ರದರ್ಶನದ ಮೂಲಕ ಅನ್ವೇಷಣೆ ನಡೆಸಲಾಯಿತು.
ಬಳಿಕ ತಾಂತ್ರಿಕ ಕಾರ್ಯಾಗಾರ ಉದ್ದೇಶಿಸಿ ಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ.ವೈ.ಟಿ.ಕೃಷ್ಣೇಗೌಡ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ 360ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಹೆಚ್ಚಿನ ತಾಂತ್ರಿಕತೆ ಹೊರತೆಗೆಯುವ ಉದ್ದೇಶದಿಂದ ಕಾಮೆಡ್-ಕೆ ಸಹಯೋಗದೊಂದಿಗೆ ತಾಂತ್ರಿಕ ಕಾರ್ಯಾಗಾರ ಅನ್ವೇಷಣೆ ನಡೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತೆಗೆಯುವುದು ಇದರ ಉದ್ದೇಶ ಎಂದರು.
ಮೈಸೂರಿನ ಮಹಾರಾಜ ತಾಂತ್ರಿಕ ಕಾಲೇಜಿನ ಜಂಟಿ ನಿರ್ದೇಶಕ ಡಾ.ಎಚ್.ಕೆ.ಚೇತನ್, ಕಾಮೆಡ್-ಕೆ ಸಂಚಾಲಕ ಪ್ರಬೋದ್ ಸಾಯಿ ದತ್ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.