ನಾಗರಹಾಳ ಗ್ರಾಪಂನಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸಮಿತಿ ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೇದಾರ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ನೀಲಮ್ಮ ಮಾನಪ್ಪ ಮುಕ್ಕಣ್ಣನವರು, ಉಪಾಧ್ಯಕ್ಷ ದೇವೇಂದ್ರಪ್ಪ, ಪಿಡಿಒ ಪ್ರವೀಣ್ ಪಾಟೀಲ್ ಇದ್ದರು. 
ಜಿಲ್ಲೆ

ತಾಂತ್ರಿಕ ದೋಷದಿಂದ ಹಣ ವರ್ಗಾವಣೆ ಸ್ಥಗಿತ

Kopala - Desk - Eraveni

ಮುದಗಲ್: ಸಮೀಪದ ನಾಗರಹಾಳ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶಿಲನ ಸಭೆ ನಡೆಯಿತು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೇದಾರ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾದ ಫಲಾನುಭವಿಗಳು 63,354. ಇದರಲ್ಲಿ 389 ಜನರ ಖಾತೆಗೆ ತಾಂತ್ರಿಕ ದೋಷದಿಂದ ಹಣ ಜಮಾವಾಗುತ್ತಿಲ್ಲ.

ಯುವನಿಧಿ ಯೋಜನೆಯಡಿ ಪದವೀಧರ ಹಾಗೂ ಡಿಪ್ಲೊಮಾ ಫಲಾನುಭವಿಗಳು ಒಟ್ಟು 2985 ಇದ್ದು, ಈ ಪೈಕಿ 28 ಜನರಿಗೆ ತಾಂತ್ರಿಕ ದೋಷದಿಂದ ಹಣ ಜಮಾ ಆಗುತ್ತಿಲ್ಲ. ಬಿಪಿಎಲ್ ಕಾರ್ಡ್ 82086, ಅಂತ್ಯೋದಯ ಕಾರ್ಡ್ 9042 ಜನರು ಹೊಂದಿದ್ದು, ಒಟ್ಟು 3,03,357ಫಲಾನಾಭವಿಗಳು ಅನ್ನಭಾಗ್ಯ ಯೋಜನೆ ಲಾಭ ಪಡೆಯುತ್ತಿದ್ದಾರೆ.

ಶಕ್ತಿ ಯೋಜನೆಯಡಿ ಲಿಂಗಸುಗೂರು ಘಟಕದಿಂದ ಪ್ರತಿನಿತ್ಯ 134 ಬಸ್‌ಗಳು ಕಾರ್ಯಾಚರಣೆಯಲ್ಲಿವೆ. ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ವಿದ್ಯುತ್, ಒಟ್ಟು 38451 ನೋಂದಣಿ ಮಾಡಿರುವ ಫಲಾನಾಭವಿಗಳಿದ್ದಾರೆಂದು ಮಾಹಿತಿ ನೀಡಿದರು.

ಸಮಿತಿ ಸದಸ್ಯ ನ್ಯಾಮತುಲ್ಲಾ ಖಾದ್ರಿ, ಪ್ರಮುಖರಾದ ಶರಣಪ್ಪ ಕಟಗಿ, ಗದ್ದೆನಗೌಡ ಪಾಟೀಲ್, ಆಸ್ಲಾಂ ಪಾಷಾ, ಆಹಾರ ಇಲಾಖೆ ಅಧಿಕಾರಿ ಮಹಾಲಕ್ಷ್ಮೀ, ಸಾರಿಗೆ ಸಂಸ್ಥೆ ಅಧಿಕಾರಿ ಸಂಗಪ್ಪ ಗಡೇದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಜಯಶ್ರೀ ಇತರರಿದ್ದರು.