ಧಾರವಾಡ ಕವಿವಿ ಕನಕ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನುಡಿ ಸಡಗರ ಕಾರ್ಯಕ್ರಮದಲ್ಲಿ ಡಾ.ಸುಜಾತಾ ಮ್ಯಾಗಿನಮನಿ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಜಿಲ್ಲೆ

ಡಾ.ಸುಜಾತಾ ಮ್ಯಾಗಿನಮನಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಕನಕ ಅಧ್ಯಯನ ಪೀಠ, ಚೇತನ ಫೌಂಡೇಶನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನುಡಿ ಸಡಗರ ಕಾರ್ಯಕ್ರಮದಲ್ಲಿ ಜಿಲ್ಲೆಯ ಬಾದಾಮಿ ತಾಲೂಕಿನ ಜಮ್ಮನಕಟ್ಟಿ ಗ್ರಾಮದ ಬಿ.ಬಿ.ಸಿ.ಸರ್ಕಾರಿ ಪ್ರೌಢಶಾಲೆಯ ಚಿತ್ರ ಕಲಾ ಶಿಕ್ಷಕಿ ಡಾ.ಸುಜಾತಾ ಮ್ಯಾಗಿನಮನಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಲಾಯಿತು.

ಧಾರವಾಡ ನಗರದ ಕನಕ ಭವನ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಪರಿಗಣಿಸಿ ಪ್ರಸಕ್ತ ಸಾಲಿನ ಡಾ.ಎಸ್. ರಾಧಾಕೃಷ್ಣನ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕವಿವಿ ಕುಲ ಸಚಿವೆ ಪ್ರೊ.ಚಂದ್ರಮ್ಮ.ಎಂ., ಕುಲಸಚಿವ ಡಾ. ಹನುಮೇಗೌಡ .ಸಿ. ಸಂಯೋಜಕಿ ಡಾ. ಚಿಕ್ಕ ಹೆಜ್ಜಾಜಿ, ಶಶಿಕಲಾ ಹೆಬ್ಳಿಕರ ಇದ್ದರು.