ಜಿಲ್ಲೆ

ಟೀಂ ಮೈಸೂರು ತಂಡದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸದೇಶ್ ಕಾರ್ಮಾಡ್

ಮೈಸೂರು: ಟೀಂ ಮೈಸೂರು ತಂಡದ ವತಿಯಿಂದ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕೂ ಹೆಚ್ಚು ಅಂಕಗಳನ್ನು ಪಡೆದು ತೇಗರ್ಡೆಯಾದ 42 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇಟ್ಟಿಗೆಗೂಡಿನ ಮಾರಿಯಮ್ಮ

ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಎಸ್ಸೆಸ್ಸೆಲ್ಸಿಯ 27 ಹಾಗೂ ಪಿಯುಸಿಯ 15 ವಿದ್ಯಾರ್ಥಿಗಳನ್ನು ಶಾಸಕ ಟಿ.ಎಸ್. ಶ್ರೀವತ್ಸ, ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ದಿ ಮೈಸೂರು ಮರ್ಚಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಬಿ.ಕೋದಂಡರಾಮು ರವರು ಮತ್ತು ಇತರೆ ಗಣ್ಯರುಗಳಿಂದ ಗೌರವಿಸಿದರು.

ಟೀಂ ಮೈಸೂರು ತಂಡದ ಸದಸ್ಯ ಗೋಕುಲ್ ಗೋವರ್ಧನ್ ಮಾತನಾಡಿ, ಹಸಿರು ಮೈಸೂರು ಅಭಿಯಾನದಡಿಯಲ್ಲಿ ಟೀಂ ಮೈಸೂರು ನಗರದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯ ಮಾಡುತ್ತಿದೆ. ಇದರ ಜತೆಗೆ ದೇಶಭಕ್ತರ ಜಯಂತಿಗಳು, ಯೋಧರ ಸ್ಮರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಪ್ರತಿಭೆಗೆ ಮನ್ನಣೆ ನೀಡುವ ಇಂತಹ ವಿಶಿಷ್ಟ ಸೇವಾ ಕಾರ್ಯವನ್ನು ಟೀಂ ಮೈಸೂರು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ್ ಮಾತನಾಡಿ, ಪತ್ರಿಭೆ ಎಲ್ಲರಲ್ಲಿಯೂ ಇರುತ್ತದೆ, ಅದನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಮುಖ್ಯ. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕರು ಹಾಗೂ ಪಾಲಕರ ಶ್ರಮವೂ ಇರುತ್ತದೆ, ಅವರನ್ನು ಮರೆಯಬಾರದೆಂಬ ಕಿವಿಮಾತನ್ನು ಹೇಳಿದರು.

ಪ್ರತಿಭೆ ಎಲ್ಲರಲ್ಲಿಯೂ ಅಡಗಿರುತ್ತದೆ, ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಅಂಕಗಳಿಗಿಂತ ಜ್ಞಾನ ಸಂಪಾದನೆ ಮುಖ್ಯವಾದುದು, ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಅಪಮಾನಿಸಬೇಡಿ ಎಂದು ಪಾಲಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಟೀಂ ಮೈಸೂರು ತಂಡದ ಸದಸ್ಯರಾದ ಹರೀಶ್ ವಿ.ಶೆಟ್ಟಿ, ಕಿರಣ್ ಜೈ ರಾಮೇಗೌಡ, ಹಿರಿಯಣ್ಣ , ಅನಿಲ್ ಜೈನ್, ಮುರಳಿ, ರಾಮಪ್ರಸಾದ್, ದಾಮೋದರ್, ಮನೋಹರ, ಹರೀಶ್ ಶೆಟ್ಟಿ, ಸುನಿಲ್, ಗಣೇಶ್, ಪ್ರಸನ್ನ ರಾಜ್‌ಗುರು, ನವೀನ್ ಶೆಟ್ಟಿ, ಸಿ.ಎನ್. ರಾಘವೇಂದ್ರ, ಸಚಿನ್, ಕೃಷ್ಣ, ನವೀನ್, ಹರೀಶ್, ತಿಲಕ್, ಮನೋಜ್, ಸಹನಾ, ಶಾಂತಕುಮಾರಿ, ಸುಧಾ ಮುರಳಿ, ಮಂಜುಳಾ, ಉಮಾ ಹಿರಿಯಣ್ಣ, ಜ್ಯೋತಿ ರಾಮ ಪ್ರಸಾದ್, ಪೂಜಾಶ್ರೀ, ಸುಕೃತ ಇದ್ದರು.