ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಟೀಂ ಇಂಡಿಯಾದ ಥ್ರೋಡೌನ್ ತಜ್ಞ ರಾಘವೇಂದ್ರ ಭೇಟಿ ನೀಡಿದರು. ದೇವಳದ ಎಇಒ ಯೇಸುರಾಜು, ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್. ಮೊದಲಾದವರಿದ್ದರು. 
ಜಿಲ್ಲೆ

ಶ್ರೀಲಂಕಾ ಪ್ರವಾಸ ಯಶಸ್ಸಿಗೆ ರಾಘವೇಂದ್ರ ಪ್ರಾರ್ಥನೆ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬುಧವಾರ ಟೀಂ ಇಂಡಿಯಾದ ಥ್ರೋಡೌನ್ ತಜ್ಞ ರಾಘವೇಂದ್ರ ಭೇಟಿ ನೀಡಿದರು.

ದೇವರ ದರ್ಶನ ಮಾಡಿ, ಭಾರತೀಯ ತಂಡ ಟಿ-20 ವಿಶ್ವಕಪ್‌ನಲ್ಲಿ ವಿಶ್ವ ಚಾಂಪಿಯನ್ ಆಗಲು ಪ್ರಾರ್ಥಿಸಿದಂತೆ ಮಹಾಭಿಷೇಕ ಸೇವೆ ಸಮರ್ಪಿಸಿದರು.

ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ಭಾರತೀಯ ತಂಡ ಜಯಶಾಲಿಯಾಗಬೇಕೆಂದು ಪ್ರಾರ್ಥನೆ ಸಲ್ಲಿಸಿದರು. ಅರ್ಚಕ ರಾಮಕೃಷ್ಣ ನೂರಿತ್ತಾಯ ಶಾಲು ಹೊದಿಸಿ ಮಹಾಪ್ರಸಾದ ಮತ್ತು ಮಹಾಭಿಷೇಕದ ಪ್ರಸಾದ ನೀಡಿದರು. ಬಳಿಕ ದೇವಳದ ಆಡಳಿತ ಕಚೇರಿಯಲ್ಲಿ, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು ಸ್ವಾಗತಿಸಿದರು. ಶ್ರೀ ದೇವಳದ ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್, ಹರೀಶ್, ದೇವಳದ ಕೃಷ್ಣಪ್ರಸಾದ್, ಕೆ.ಜಿ.ಭಟ್, ಸುಬ್ರಹ್ಮಣ್ಯ ಸ್ನೇಹಿತರಾದ ಪಪ್ಪು ಲೋಕೇಶ್, ದೀಪಕ್ ನಂಬಿಯಾರ್ ಉಪಸ್ಥಿತರಿದ್ದರು.