ಸೋಮವಾರಪೇಟೆ: ಯಡೂರು ಗ್ರಾಮದ ವೈಸಿಸಿ ಕ್ರಿಕೆಟ್ ಕ್ಲಬ್‌ನ 25ನೇ ವರ್ಷಾಚರಣೆ ಅಂಗವಾಗಿ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರತ್ಯೇಕ ವಿಭಾಗದ ಕ್ರಿಕೆಟ್ ಪಂದ್ಯದಲ್ಲಿ ಟೀಮ್ ಇಂಡಿಯನ್ಸ್ ಮಾದಾಪುರ ಹಾಗೂ ಟೀಮ್ ಭಗವತಿ ಸಿದ್ದಾಪುರ ತಂಡಗಳು ಪ್ರಥಮ ಸ್ಥಾನ ಗಳಿಸಿದವು.
35 ವರ್ಷ ಮೇಲ್ಪಟ್ಟ ಆಟಗಾರರಿಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯದಲ್ಲಿ ಟೀಮ್ ಇಂಡಿಯನ್ಸ್ ಮಾದಾಪುರ ತಂಡ ಪ್ರಥಮ, ವೈಸಿಸಿ ಯಡೂರು ತಂಡ ದ್ವಿತೀಯ ಸ್ಥಾನ ಪಡೆಯಿತು.
ಮತ್ತೊಂದು ವಿಭಾಗದಲ್ಲಿ ನಡೆದ ಮುಕ್ತ ಕ್ರಿಕೆಟ್ ಪಂದ್ಯದಲ್ಲಿ ಟೀಮ್ ಭಗವತಿ ಸಿದ್ದಾಪುರ ತಂಡ ಪ್ರಥಮ, ಪ್ಲೇ ಬಾಯ್ಸ ಮಾಲ್ದಾರೆ ತಂಡ ದ್ವಿತೀಯ ಸ್ಥಾನ ಗಳಿಸಿತು.
35 ವರ್ಷ ಮೇಲ್ಪಟ್ಟ ಪಂದ್ಯದಲ್ಲಿ ಪ್ರಥಮ ಬಹುಮಾನವಾಗಿ 10 ಸಾವಿರ ನಗದು, ದ್ವಿತೀಯ ಬಹುಮಾನವಾಗಿ 6 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು. ಮುಕ್ತ ಕ್ರಿಕೆಟ್ ಪಂದ್ಯದಲ್ಲಿ ಪ್ರಥಮ 30 ಸಾವಿರ ನಗದು, ದ್ವಿತೀಯ 20 ಸಾವಿರ ನಗದು ಸೇರಿದಂತೆ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು.
ಮುಕ್ತ ಕ್ರಿಕೆಟ್ ಪಂದ್ಯದ ಬೆಸ್ಟ್ ಬ್ಯಾಟ್ಸ್‌ಮನ್ ಮಾಲ್ದಾರೆ ತಂಡದ ಲಿಂಗ, ಬೆಸ್ಟ್ ಬೌಲರ್ ಮಾಲ್ದಾರೆ ತಂಡದ ಕಿಶೋರ್, ಬೆಸ್ಟ್ ಫೀಲ್ಡರ್ ಕುಶಾಲನಗರದ ಬಿಪಿನ್, ಫೈನಲ್ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಟೀಮ್ ಭಗವತಿ ತಂಡದ ರಾಕೇಶ್, ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು ಭಗವತಿ ತಂಡದ ಕೀಜನ ಯತೀಶ್ ಪಡೆದರು.
35 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್ ವೈಸಿಸಿ ತಂಡದ ಸಂತೋಷ್, ಬೆಸ್ಟ್ ಬೌಲರ್ ವೈಸಿಸಿ ತಂಡದ ಜೀವನ್ ದಳವಾಯಿ, ಬೆಸ್ಟ್ ಫೀಲ್ಡರ್ ವೈಸಿಸಿ ತಂಡದ ಗಿರೀಶ್, ಫೈನಲ್ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಮಾದಾಪುರ ತಂಡದ ಚೇತನ್, ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು ಮಾದಾಪುರದ ಬಿಪಿನ್ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈಸಿಸಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಎ.ಎಲ್. ಸಂದೇಶ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯ ಡಿ.ಎಂ. ಸುರೇಶ್, ಮಿಥುನ್ ಹಾನಗಲ್, ಕೆ.ಎಸ್. ಪ್ರಕಾಶ್, ಪ್ರಮುಖರಾದ ವೈ.ಎಂ.ನಾಗರಾಜು, ಡಿ.ಸಿ.ರಾಜು, ಚೌಡ್ಲು ವಿಎಸ್‌ಎಸ್‌ಎನ್ ಸದಸ್ಯ ಕೆ.ಪಿ.ಭಾನುಪ್ರಕಾಶ್ ಅವರುಗಳು ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು.
25 ನೇ ವರ್ಷಾಚರಣೆ ಹಿನ್ನೆಲೆ ಹಿರಿಯ 11ಜನ ಕ್ರಿಕೆಟ್ ಆಟಗಾರರು ಹಾಗೂ ಕ್ರೀಡಾಕೂಟಕ್ಕೆ ಸಹಕಾರ ನೀಡುತ್ತಿರುವ ಗ್ರಾಮದ ಹಿರಿಯರಾದ ಡಿ.ಎಂ. ಪುಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು.