ಧಾರವಾಡ: ಭಾರತೀಯ ಕ್ರಿಕೆಟ್ ತಂಡ ಬಲಿಷ್ಠವಾಗಿದ್ದು, ಈ ಬಾರಿ ವಿಶ್ವಕಪ್ ಗೆಲ್ಲಲಿದೆ ಎಂದು ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ತಂಡ ಉತ್ತಮ ಆಟಗಾರರಿಂದ ಕೂಡಿದೆ. ಹಾಗಾಗಿ ಭಾರತಕ್ಕೆ ವಿಶ್ವಕಪ್ ಗೆಲ್ಲುವ ಉತ್ತಮ ಅವಕಾಶವಿದೆ. ಆದ್ದರಿಂದ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿ ಎಂದು ಆಶಿಸುತ್ತೇನೆ ಎಂದರು.
- ಟೆನಿಸ್ ಆಡಿದ ಅಜರ್: ವಿಶ್ವ ಟೆನಿಸ್ ಟೂರ್ನಿ ಉದ್ಘಾಟಿಸಿದ ಮೊಹಮ್ಮದ್ ಅಜರುದ್ದೀನ್ ವಿದೇಶಿ ಆಟಗಾರರೊಂದಿಗೆ ಟೆನಿಸ್ ಆಡಿ ಸಂಭ್ರಮಿಸಿದರು. ಇದೇವೇಳೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರೊಂದಿಗೆ ಕೆಲಕಾಲ ಟೆನಿಸ್ ಆಡಿದರು. ದೇಶಿ ಹಾಗೂ ವಿದೇಶಿ ಆಟಗಾರರ ಕೈ ಕುಲುಕಿ ಶುಭ ಕೋರಿದರು. ಸ್ಥಳೀಯ ಕ್ರಿಕೆಟ್ ಪಟುಗಳು ಹಾಗೂ ಕ್ರೀಡಾಪಟುಗಳು ಅಜರುದ್ದೀನ್ ಜೊತೆ ಸೆಲಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು.