ಜಿಲ್ಲೆ

ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಭೇಟಿ

Udupi

ಬ್ರಹ್ಮಾವರ: ಕರೊನಾ ವೈರಸ್ ಹಿನ್ನೆಲೆ ಶಾಲಾ ಶಿಕ್ಷಣ ಹೊಸರೂಪ ಪಡೆಯುವಂತೆ ಆಗಿದೆ. ಟಿವಿಯಲ್ಲಿ ಮತ್ತು ವಿದ್ಯುನ್ಮಾನದ ಮೂಲಕ ಶಿಕ್ಷಣ ನೀಡುವ ಸರ್ಕಾರಿ ಆದೇಶಕ್ಕೆ ಸರ್ಕಾರದಿಂದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಸರಿಯಾಗಿ ಸ್ಪಂದಿಸುತ್ತಾರಾ ಎನ್ನುವುದನ್ನು ಪ್ರತಿಯೊಂದು ಪ್ರದೇಶದಲ್ಲಿ ಶಾಲಾ ಶಿಕ್ಷಕರು ತೆರಳಿ ಪರಿಶೀಲಿಸುವ ಕ್ರಮ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ನಡೆಯುತ್ತಿದೆ.

ಇಲ್ಲಿ 8ರಿಂದ 1ನೇ ತರಗತಿಯಲ್ಲಿ 900 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಎ.ಬಿ.ಸಿ.ಡಿ.ಇ ತನಕ ತರಗತಿ ನಡೆಯುತ್ತಿದ್ದು 26 ಕಾಯಂ ಶಿಕ್ಷಕರು ಶಿಕ್ಷಣ ನೀಡುತ್ತಿದ್ದು, ಇಲ್ಲಿಗೆ 25 ಕಿ.ಮೀ. ದೂರದಿಂದ ಬರುವ ವಿದ್ಯಾರ್ಥಿಗಳೂ ಇದ್ದಾರೆ. ಬಾರಕೂರು, ಕೊಕ್ಕರ್ಣೆ, ಆವರ್ಸೆ, ಸಂತೆಕಟ್ಟೆ, ಕುಂದಾಪುರ ಸಾಸ್ತಾನ ಭಾಗದ ಕೆಲವು ಕಡೆಯಲ್ಲಿ ಪ್ರತೀ ದಿನ ಒಂದೊಂದು ಭಾಗದಲ್ಲಿ ಶಿಕ್ಷಕರು ಭಾಗವಹಿಸುತ್ತಾರೆ.

ಮನೆಯಲ್ಲಿ ಸಾಮಾಜಿಕ ಜಾಲತಾಣದಿಂದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಸರಿಯಾಗಿ ಗ್ರಹಿಸಿದ್ದಾರಾ ಅಥವಾ ತರಗತಿಯಲ್ಲಿ ತಿಳಿಯದಿರುವುದನ್ನು ಅವರಿಗೆ ತಿಳಿಸಲು ಅವರು ವಾಸಿಸುವ ಮನೆಗಳಿಗೆ ಅಥವಾ ಹತ್ತಾರು ವಿದ್ಯಾರ್ಥಿಗಳು ಒಂದೆಡೆ ಸೇರಲು ಅವಕಾಶ ಇದ್ದಲ್ಲಿ ಕ್ಷಿಷ್ಟವಾದ ವಿಷಯವನ್ನು ಮನವರಿಕೆ ಮಾಡುವುದಕ್ಕಾಗಿ 68 ಕಡೆಯಲ್ಲಿ ತರಗತಿ ಮಾಡಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಕ್ರಮದಲ್ಲಿ ಶಿಕ್ಷಕರು ಶಿಕ್ಷಣ ನೀಡಿದಲ್ಲಿ ಮಾತ್ರ ಮತ್ತೆ ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗಲು ಇದೊಂದು ಉತ್ತಮ ಕ್ರಮವಾಗಿದೆ.

ಸರ್ಕಾರದಿಂದ ಹಲವಾರು ಸೌಲಭ್ಯ ಪಡೆದು ಶಿಕ್ಷಣ ಪಡೆಯುವ ನಮ್ಮ ವಿದ್ಯಾರ್ಥಿಗಳಿಗೆ ಕರೊನಾ ವೈರಸ್ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಶಿಕ್ಷಣ ನೀಡುವ ಇದೊಂದು ಹೆಜ್ಜೆ ನಮ್ಮದು. ಬಿ.ಟಿ ನಾಯ್ಕ ಉಪಪ್ರಾಂಶುಪಾಲರು, ಸರ್ಕಾರಿ ಪ್ರೌಢ ಶಾಲೆ ಬ್ರಹ್ಮಾವರ