ಅಂಕಲಿ ಗ್ರಾಮದಲ್ಲಿ ಆಯೋಜಿಸಿದ್ದ ವಿಜ್ಞಾನವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಸುರೇಶ ಪಾಟೀಲ ಉದ್ಘಾಟಿಸಿದರು. ಸುರೇಶ ಪಾಟೀಲ, ಆರ್.ಕೆ.ಪಾಟೀಲ, ಬಿ.ಎಸ್. ಅಂಬಿ, ವಿವೇಕಾನಂದ ಕಮತೆ, ಜ್ಯೋತಿ ತಮ್ಮಗೌಡ ಇತರರಿದ್ದರು. 
ಜಿಲ್ಲೆ

ಶಿಕ್ಷಕರೇ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ

ಪ್ರಶಾಂತ ಹೂಗಾರ

ಮಾಂಜರಿ: ಪ್ರತಿ ಮಗುವಿನಲ್ಲಿ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಶಿಕ್ಷಕರು ಮತ್ತು ಪಾಲಕರು ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದಾಗ ಆತ ಸಾಧಕನಾಗಬಲ್ಲ. ವಿದ್ಯಾರ್ಥಿಗಳ ವೈಜ್ಞಾನಿಕ ಪ್ರತಿಭೆ ಗುರುತಿಸಲು ವಿಜ್ಞಾನ ವಸ್ತು ಪ್ರದರ್ಶನ ಸೂಕ್ತ ಮಾರ್ಗ ಎಂದು ಕೆಎಲ್‌ಇ ಪ್ರಾಚಾರ್ಯ ಆರ್.ಕೆ. ಪಾಟೀಲ ಹೇಳಿದರು.

ಸಮೀಪದ ಅಂಕಲಿ ಗ್ರಾಮದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಶ್ರೀಮತಿ ಶಾರದಾದೇವಿ ಕೋರೆ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಕಲಾ ಮತ್ತು ವಾಣಿಜ್ಯ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಾಳಿ, ನೀರು ಮತ್ತು ಆಹಾರದಷ್ಟೇ ಆಧುನಿಕ ಜೀವನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಮುಖ್ಯವಾಗಿದೆ. ವಿದ್ಯಾರ್ಥಿಗಳು ಆಸಕ್ತಿ ವಹಿಸಿ ವಿದ್ಯಾಭ್ಯಾಸದಲ್ಲಿ ತೊಡಗಿದಾಗ ಇಸ್ರೋ ವಿಜ್ಞಾನಿಗಳಂತೆ ಸಾಧನೆ ಮಾಡುತ್ತಾರೆ. ಮಾನವೀಯ ಮೌಲ್ಯ ಮತ್ತು ಪ್ರಾಮಾಣಿಕತೆ ರೂಢಿಸಿಕೊಂಡು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಗ್ರಾಪಂ ಸದಸ್ಯ ಸುರೇಶ ಪಾಟೀಲ ಮಾತನಾಡಿ, ಮಕ್ಕಳ ಸೃಜನಾತ್ಮಕ ಕೌಶಲ ತೋರ್ಪಡಿಸಲು ವಿಜ್ಞಾನ ವಸ್ತು ಪ್ರದರ್ಶನ ಸೂಕ್ತ ವೇದಿಕೆೆ ಎಂದರು.
ಸಂಸ್ಥೆಯ ಆಜೀವ ಸದಸ್ಯ ಬಿ.ಎಸ್.ಅಂಬಿ ಮಾತನಾಡಿದರು.

ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ವಿವೇಕಾನಂದ ಕಮತೆ, ಎಂ.ಆರ್. ಹೊಸಮನಿ, ಕಾಲೇಜು ಪ್ರಾಚಾರ್ಯರಾದ ಎ.ಕೆ. ಪಾಟೀಲ, ಆರ್.ಸಿ.ಪಾಟೀಲ, ಜ್ಯೋತಿ ತಮಗೌಡ, ಸಂತೋಷ ಹಿರೇಮಠ, ವೈ.ಬಿ. ಮಚಕುನೂರ, ಸಿ.ಬಿ.ಪಾಟೀಲ, ಎಂ.ಎಂ. ಮೈಶಾಳೆ, ಪಿ.ಎನ್. ತಳವಾರ, ಆರ್.ಸಿ.ಪಾಟೀಲ, ಸಾಗರ ಖೋತ ಇತರರಿದ್ದರು.