ಜಿಲ್ಲೆ

ಚೆಕ್‌ಪೋಸ್ಟ್‌ಗಳಲ್ಲಿ ಶಿಕ್ಷಕರಿಗೆ ಡ್ಯೂಟಿ

Udupi

 ಬೆಳ್ಮಣ್: ಕೊವಿಡ್-19 ತಡೆಗೆ ಲಾಕ್‌ಡೌನ್ ಹಿನ್ನ್ನೆಲೆಯಲ್ಲಿ ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಜತೆ ಶಿಕ್ಷಕರನ್ನೂ ವೀಕ್ಷಕರನ್ನಾಗಿ ನೇಮಿಸಿ ಗಡಿ ಕಾಯುವ ಜವಾಬ್ದಾರಿ ವಹಿಸಲಾಗಿದೆ. ಉಡುಪಿ ಜಿಲ್ಲೆಯ 45ಕ್ಕೂ ಹೆಚ್ಚು ಆಯಕಟ್ಟಿನ ಗಡಿಗಳಲ್ಲಿ ಶಿಕ್ಷಕರನ್ನು ವೀಕ್ಷಕರನ್ನಾಗಿ ನೇಮಿಸಿಕೊಳ್ಳುವಂತೆ ಏ.14ರಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಚೆಕ್‌ಪೋಸ್ಟ್‌ಗಳಲ್ಲಿ ಮೊದಲಿಗೆ ಪೊಲೀಸರು ಕರ್ತವ್ಯ ನಿರ್ವಹಿಸಿದು,್ದ ಆ ಬಳಿಕ ಅವರಿಗೆ ಸ್ವಲ್ಪ ಕೆಲಸಗಳು ಸುಲಭವಾಗಲಿ ಎಂದು ಗ್ರಾಮಕರಣಿಕರನ್ನು ನೇಮಿಸಲಾಯಿತು. ಈಗ ಮತ್ತೆ 24 ಗಂಟೆ ಕಾರ್ಯನಿರ್ವಹಿಸುವ ಚೆಕ್‌ಪೋಸ್ಟ್‌ಗಳಲ್ಲಿ 3 ಶಿಫ್ಟ್‌ಗೆ ಪೊಲೀಸರು, ಪಂಚಾಯಿತಿ ಸಿಬ್ಬಂದಿ ಹಾಗೂ ಶಿಕ್ಷಕರನ್ನು ನೇಮಿಸಲಾಗಿದೆ. ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕರು ಈಗ ಜಿಲ್ಲಾದ್ಯಂತ ಇರುವ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಕಳ ತಾಲೂಕಿನ 4 ಚೆಕ್‌ಪೋಸ್ಟ್‌ಗಳಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಶಿಕ್ಷಕರನ್ನು ವಿಶೇಷ ತಪಾಸಣೆ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲಿದ್ದು, ಆರೋಗ್ಯ ಇಲಾಖೆಯ ಮೂಲಕ ಅವರಿಗೆ ತರಬೇತಿ ನೀಡಲಾಗುವುದು - ಪುರಂದರ್ ಹೆಗ್ಡೆ, ಕಾರ್ಕಳ ತಹಸೀಲ್ದಾರ್