ಜಿಲ್ಲೆ

ಸಮಾಜದಲ್ಲಿ ಶಿಕ್ಷಕರಿಗಿದೆ ಗೌರವಯುತ ಸ್ಥಾನ

ಬಸವರಾಜ ವೀರಪ್ಪ ಗರಗ

ಉಪ್ಪಿನಬೆಟಗೇರಿ: ಶಿಕ್ಷಕರು ದೇಶ ಕಟ್ಟುವ ಕೆಲಸ ಮಾಡುತ್ತಿದ್ದು, ಸಮಾಜದಲ್ಲಿ ಅವರಿಗೆ ಗೌರವಯುತ ಸ್ಥಾನ ನೀಡಲಾಗಿದೆ ಎಂದು ರಾಜ್ಯ ರೈತ ಹೋರಾಟಗಾರ ಗಂಗಾಧರ ಪಾಟೀಲ ಕುಲಕರ್ಣಿ ಹೇಳಿದರು.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಮೂಗಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಜರುಗಿದ ಮಾರಡಗಿ ಎಸ್​ಜಿಜಿಬಿಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕ ವೀರಭದ್ರಪ್ಪ ಜಾಕೋಜಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿ.ಪಿ. ಜಾಕೋಜಿ ಶಿಕ್ಷಕ ವೃತ್ತಿ ಜೀವನದಲ್ಲಿ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ. ಅವರ ಸೇವಾ ಕಾರ್ಯ ಶ್ಲಾಘನೀಯ ಎಂದರು.

ಸೇವಾ ನಿವೃತ್ತಿ ಹೊಂದಿ ಗೌರವ ಸ್ವೀಕರಿಸಿದ ಮುಖ್ಯಾಪಾಧ್ಯಾಪಕ ವೀರಭದ್ರಪ್ಪ ಜಾಕೋಜಿ ಮಾತನಾಡಿ, ಗುರು, ಹಿರಿಯರ ಮಾರ್ಗದರ್ಶನದಿಂದ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಲು ಸಾಧ್ಯವಾಯಿತು. ಶಿಕ್ಷಣ ಇಲಾಖೆ ಸಹಕಾರ ಹಾಗೂ ಗ್ರಾಮಸ್ಥರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿರುತ್ತೇನೆ ಎಂದರು. ಈ ವೇಳೆ ಅವರು ಮಾರಡಗಿ ಗ್ರಾಮದ ಪ್ರೌಢಶಾಲೆಗೆ ದತ್ತಿನಿಧಿಯಾಗಿ ರೂ.50 ಸಾವಿರ ರೂ.ಗಳ ಚೆಕ್ ನೀಡಿದರು.

ಮೊರಬ ಜಡೆಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಧಾರವಾಡ ಜಿಲ್ಲೆ ಸಮಗ್ರ ಶಿಕ್ಷಣ ಯೋಜನಾ ಉಪ ಸಮನ್ವಯಾಧಿಕಾರಿ ಎಸ್.ಎಂ. ಹುಡೇದಮನಿ, ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ ಭೋವಿ, ಕುಮಾರ ಕೆ.ಎಫ್., ಈಶ್ವರ ಆಯಟ್ಟಿ, ಅಡಿವೆಪ್ಪ ಮನಮಿ, ಗಿರಿಮಲ್ಲಯ್ಯ ಸ್ವಾಮಿ, ಎಂ.ಎನ್. ಮೋರೆ, ಸಿ.ಎಂ. ಕಾಳೆ, ಸಂಭಾಜಿರಾವ ಕಾಶಿದ, ಸಹದೇವ ಹಾವೇರಿ, ಎನ್.ಸಿ. ಹುಂಬಿ, ಶಂಕ್ರೆಪ್ಪ ಸೂರ್ಯವಂಶಿ, ಪೃಥ್ವಿರಾಜ ಚವಾಣ, ಎಸ್.ಪಿ. ಜಾಕೋಜಿ, ಎಂ.ಎಸ್. ನರೇಗಲ್, ಇತರರು ಉಪಸ್ಥಿತರಿದ್ದರು.