ಜಿಲ್ಲೆ

ಗಿರಿಯಾಲದಲ್ಲಿ ಹಳೇ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಸನ್ಮಾನ

ಹುಬ್ಬಳ್ಳಿ: ತಾಲೂಕಿನ ಗಿರಿಯಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಗುರುವಾರ ಶಿಕ್ಷಕರ ದಿನದ ಅಂಗವಾಗಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಠ್ಠಲ ಸುಡಕೇನವರ, ಕೃಷ್ಣ ಪಾಟೀಲ, ಮುಸ್ತಾಕ ಲಂಗೋಟಿ, ಅರ್ಜುನ ಬಂಕಾಪೂರ ಇತರರು ಶಾಲೆಯ ಶಿಕ್ಷಕರನ್ನು ಸನ್ಮಾನಿಸಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾದ ಎಸ್.ಆರ್. ಜಡಿ, ಹಳೆಯ ವಿದ್ಯಾರ್ಥಿ ಸಂಘದ ಸಂಚಾಲಕಿ ಜೆ.ಬಿ. ಸವದತ್ತಿ, ಹಿರಿಯ ಶಿಕ್ಷಕಿ ಹರಪನಹಳ್ಳಿ, ಜಿ.ಎಸ್. ಕೋರಿ, ಜಯಶ್ರೀ ಇತರರು ಸನ್ಮಾನ ಸ್ವೀಕರಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಜಿ.ಎಸ್. ದೇವಾಂಗಮಠ ಅಧ್ಯಕ್ಷತೆ ವಹಿಸಿದ್ದರು.
ಹಳೆಯ ವಿದ್ಯಾರ್ಥಿ ಯಲ್ಲಪ್ಪ ಸಾಳುಂಕೆ ಪ್ರಾಸ್ತಾವಿಕ ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಹಳೆಯ ವಿದ್ಯಾಥಿರ್ ಸಂಘವು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಶಿಕ್ಷಕಿ ಸವಿತಾ ಎಸ್.ಜೆ. ಕಾರ್ಯಕ್ರಮ ನಿರೂಪಿಸಿದರು.