ಜಿಲ್ಲೆ

ಒಂದು ತಿಂಗಳ ಕಾಲ ಶಿಕ್ಷಕರ ದಿನಾಚರಣೆ ಗುರಿ

Davangere - Desk - Mahesh Babu E

ಚಿತ್ರದುರ್ಗ: ಸೆಪ್ಟೆಂಬರ್ 5 ರಂದು ಒಂದು ದಿನ ಮಾತ್ರ ಶಿಕ್ಷಕರ ದಿನಾಚರಣೆ ಮಾಡಿ ಸುಮ್ಮನಾದರೆ ಸಾಲದು, ಪ್ರತಿದಿನ ಆಚರಣೆ ಅಗತ್ಯ ಎಂದು ಲ್ಲಾ ಕಾಂಗ್ರೆಸ್ ಸಮಿತಿ ಶಿಕ್ಷಕರ ಮತ್ತು ಪದವೀಧರರ ವಿಭಾಗದ ಜಿಲ್ಲಾಧ್ಯಕ್ಷ ಮುದಾಸಿರ್ ನವಾಜ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಇಂದಿನ ಶಿಕ್ಷಕರ ಬಗ್ಗೆ, ಹಿಂದಿನ ಮೇಷ್ಟ್ರುಗಳ ಕಾಯಕದ ಬಗ್ಗೆ ಅರಿವು ಮೂಡಿಸಲು ಮತ್ತು ಶೈಕ್ಷಣಿಕ ಸಾಧನೆ ಮಾಡಿದವರ ನೆನಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ ತಿಂಗಳು ಸಂಪೂರ್ಣ ಜಿಲ್ಲಾದ್ಯಂತ ವಿವಿಧ ಶಾಲಾ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮ ಮಾಡಲಾಗುವುದು ಎಂದರು.

ನಮ್ಮಲ್ಲಿ ಗುರುಗಳಿಗೆ ಪರಮ ಪವಿತ್ರ ಸ್ಥಾನವಿದೆ. ಪ್ರತಿಯೊಬ್ಬರ ಬಾಳಿನಲ್ಲೂ ಜ್ಞಾನದ ದೀವಿಗೆ ಹಚ್ಚುವವರು ಗುರುಗಳು. ಇಂತಹ ಗುರುಗಳಿಗೆ ಮೀಸಲಾದ ದಿನ ಸಪ್ಟೆಂಬರ್ 5 ಕ್ಕೆ ಸೀಮಿತವಾಗಬಾರದು. ಇದನ್ನು ನಾವು ಜಿಲ್ಲಾಧ್ಯಂತ ವಿವಿಧ ಕಾರ್ಯಕ್ರಮಗಳಾಗಿ ಮಾಡುವ ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷ ಮಧುಕುಮಾರ್, ಎಸ್‌ಟಿ ಸೆಲ್ ಜಿಲ್ಲಾಧ್ಯಕ್ಷ ಅಂಜಿನಪ್ಪ, ಒಬಿಸಿ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್. ಐಟಿ ಸೆಲ್ ಜಿಲ್ಲಾಧ್ಯಕ್ಷ ಮೂಡಲಗಿರಿಯಪ್ಪ, ನಗರ ಕಾರ್ಮಿಕ ವಿಭಾಗದ ಅಧ್ಯಕ್ಷ ಯಾಸಿನ್, ವಿದ್ಯಾರ್ಥಿ ಮುಖಂಡರಾದ ಎಸ್.ಹೆಚ್. ತರುಣ್, ಬಿ.ಆರ್.ಭೂಮಿಕಾ, ಸುದೀಪ್, ಪ್ರಸನ್ನ, ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಜಿಲ್ಲಾಧ್ಯಕ್ಷ ಮಾಲತೇಶ್ ಅರಸ್, ಇತರರು ಇದ್ದರು.