Gadag: ನಗರದ ಬಾಲ ವಿನಾಯಕ ವಿದ್ಯಾನಿಕೇತ ಶಾಲೆಯಲ್ಲಿ ಹಲವಾರೂ ವಿದ್ಯಾರ್ಥಿಗಳ ಅಚ್ಚು ಮಿಚ್ಚಿನ ಶಿಕ್ಷಕಿ ಐರಿಸ್ ಫುಲಿಇನ್‌ಫಾ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ತಮ್ಮ ಶಿಕ್ಷಣ ವೃತ್ತಿಯ ಅನುಭವಗಳನ ಹಂಚಿಕೊAಡರು.
ತಮ್ಮೆಲ್ಲ ನೊವುಗಳನ್ನು ಮರೆತು ಮಕ್ಕಳಿಗೆ ಜ್ಞಾನ ನೀಡುವ ಮನಕುಲವೆ ಶಕ್ಷಕ ವೃತ್ತಿ. ಮಕ್ಕಳು ತಮ್ಮ ಶಿಕ್ಷಕರಿಗೆ ಯಾವತ್ತು ಗೌರವ ಸೂಚಕರಾಗಿರಬೇಕು ಎಂದು ತಿಳಿ ಹೇಳಿದರು. ಯಾವುದೇ ರೀತಿಯಾಗಿಯೂ ಮೊಬೈಲುಗಳ ಗುಲಾಮರಾಗದೆ ಮಕ್ಕಳು ತಮ್ಮ ಅಭ್ಯಾಸವನ್ನು ಮಾಡಬೇಕು ಎಂದರು. ಶಾಲೆಯ ಮಂತ್ರಿ ಮಂಡಳದವರು ಆಯೋಜಿಸಿದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳ ಶಿಸ್ತನ್ನು ನೋಡಿ ಅವರಿಗೆ ಅಭಿನಂದಿಸಿದರು.
ಒಂಭತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳು ಶಾಲೆಯಲ್ಲಿನ ಎಲ್ಲ ಶಿಕ್ಷಕರ ಪಾತ್ರವನ್ನು ತೆಗೆದುಕೊಂಡು ಅರ್ಧ ದಿನದ ಶಾಲೆಯನ್ನು ನೆಡೆಸಿದ್ದು ಮೆಚ್ಚುಗೆಯ ಸಂಗತಿ. ಇಲ್ಲಿ ವಿದ್ಯಾರ್ಥಿಗಳು ತಾವು ತೆಗೆದುಕೊಂಡ ಶಿಕ್ಷಕರ ಪಾತ್ರದ ಅನ್ವಯವಾಗಿ ಆಯಾ ತರಗತಿಗಳನ್ನು ತಾವೇ ನಡೆಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಸ್. ರವಿ, ನಿರ್ದೆಶಕ ವಿನಾಯಕ ಆರ್, ಪ್ಲೇ ಹೋಮ್ ಮುಖ್ಯಸ್ಥೆ ಗಂಗಾ ಮಿಸ್, ಇ.ಎಲ್.ಸಿ ಮುಖಸ್ಥೆ ಮಲ್ಲಿಕಾ ಆರ್, ಪ್ರಾಚಾರ್ಯ ವಿ.ಎಂ. ಅಡ್ನೂರ್, ಉಪ ಪ್ರಾಚಾರ್ಯ ಪಿ.ಜಿ. ಬ್ಯಾಳಿ, ಸಮಸ್ತ ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತರಿದ್ದರು.
ಪ್ರಗತಿ ಮಾಳಶೆಟ್ಟಿ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಶಿಕ್ಷಕಿ ಭುವನೇಶ್ವರಿ ಮುದಲಿಯಾರ ಅತಿಥಿ ಪರಿಚಯ ಮಾಡಿದರು. ನಿಖಿಲ ಮುರ್ಖಂಡಿ ಮತ್ತು ಸಾನ್ವಿಕಾ ಭಗವತಿ ಶಿಕ್ಷಕಕರ ದಿನಾಚರಣೆಯ ಕುರಿತು ಭಾಷಣ ಮಾಡಿದರು. ಶ್ರಾವಣಿ ಅಣಿಗೇರಿ ಮತ್ತು ಸಂಘಡಿಗರು ಶಿಕ್ಷಕರ ಕುರಿತು ಹಾಡು ಹಾಡಿದರು. 10ನೇ ತರಗತಿಯ ಸಾಕ್ಷಿ ಮರಿಗೌಡರ ಮತ್ತು ಸಂಗಡಿಗರು ನೃತ್ಯ ಪ್ರದರ್ಶನ ನೆಡೆಯಿತು. ಆದಿತ್ಯ ಅಂಗಡಿ ಮತ್ತು ಸಂಗಡಿಗರು ಕಿರು ನಾಟಕ ಪ್ರದರ್ಶಿಸಿದರು. ಅಲಿಂ ನವಲಗುಂದ್ ಬಹುಮಾನ ವಿತರಣೆ ನಡೆಸಿಕೊಟ್ಟನು. ಸಿದ್ದಾರ್ಥ ಅರಸಿದ್ಧಿ ಸ್ವಾಗಸಿದನು. ಪ್ರಜ್ವಲ್ ಅದರಕಟ್ಟಿ ವಂದಿಸಿದನು. ಸೃಷ್ಟಿ ದೊಡ್ಡಮನಿ ಮತ್ತು ಸ್ವರೂಪ ಜಂಗಲಿ ನಿರೂಪಿಸಿದರು.