ಜಿಲ್ಲೆ

ರಾಜೇಶ್ವರಿ ವಿದ್ಯಾನಿಕೇತನದಲ್ಲಿಸಂಭ್ರಮದ ಶಿಕ್ಷಕರ ದಿನಾಚರಣೆ

Gadag - Shivanand Hiremath

ಹುಲಕೋಟಿ: “ರಾಧಾಕೃಷ್ಣನ ಅವರು ತತ್ವಜ್ಞಾನಿ, ಉತ್ತಮ ಶಿಕ್ಷಕರು ಎಂದು ಹೇಳಿ ಮರೆಯಬಾರದು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೆಟ್ಟ ವಿದ್ಯಾರ್ಥಿಗಳು ಇರಬಹುದು ಅದರೆ ಕೆಟ್ಟ ಶಿಕ್ಷಕರು ಇರಲು ಸಾಧ್ಯವಿಲ್ಲ. ರಾಧಾಕೃಷ್ಣನ್ ಅವರು ರಾಷ್ಟçಪತಿಗಳಾಗಿ ನೇಮಕಗೊಂಡಾಗ ಅವರ ವಿದ್ಯಾರ್ಥಿಗಳು ಅವರನ್ನು ಅತ್ಯಂತ ವೈಭವದಿಂದ ಮಾಡಿದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ಸಿಕ್ಕಿರಲಿಕ್ಕಿಲ್ಲ. ವೈಭವಕಿಂತ ಹೆಚ್ಚಾಗಿ ಹೃದಯದಿಂದ ನೇರವಾಗಿ ಹೊರಹೊಮ್ಮಿದ ಗುರುಪ್ರೇಮ. ಕಾಲೇಜಿನಿಂದ ರೈಲು ನಿಲ್ದಾಣಕ್ಕೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆ ಕಟ್ಟಲಿಲ್ಲ. ಸ್ವತಃ ವಿದ್ಯಾರ್ಥಿಗಳೇ ಎಳೆದರು. ಅವರನ್ನು ನಿಮ್ಮ ದಿನಾಚರಣೆ ಆಚರಿಸುತ್ತೇವೆ ಎಂದಾಗ ನನ್ನ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಸಲಹೆ ಕೊಟ್ಟರು. ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿದೀಪ, ಶಿಕ್ಷಕರು ವೈದ್ಯರನ್ನು, ವಿಜ್ಞಾನಿಗಳನ್ನು, ಇಂಜಿನಿಯರಗಳನ್ನು ತಯಾರಿಸುತ್ತಾರೆ. ಜಗತ್ತಿನಲ್ಲಿ ಗುರುಗಳನ್ನು ಮೀರಿಸಿದ ವಿದ್ಯಾರ್ಥಿ ಎಂದರೆ ವಿವೇಕಾನಂದರು. ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶಿಕ್ಷಕರಲ್ಲಿ ಕ್ಷಮಿಸುವ ಗುಣ, ಮಮತೆ, ಧನ್ಯತಾಭಾವ ಇರುತ್ತದೆ” ಎಂದು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಪ್ರೋ: ಜೆ.ಕೆ.ಜಮಾದಾರ ಅವರು ಹೇಳಿದರು.

ಅವರು ಸ್ಥಳಿಯ ಶ್ರೀ ರಾಜೇಶ್ವರಿ ವಿದ್ಯಾನಿಕೇತನದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮವು ಮೊದಲಿಗೆ ೬ ಹಾಗೂ ೭ನೇ ತರತಿಯ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಇಂದಿನ ಈ ಕಾರ್ಯಕ್ರಮದಲ್ಲಿ ಚಂದ್ರಯಾನ ೩ ರ ಯಶಸ್ವಿ ವಿಜ್ಞಾನಿಗಳಾದ ಶ್ರೀ ಸುಧಿಂದ್ರ ಬಿಂದಗಿ ಹಾಗೂ ಶ್ರೀ ಎಸ್.ವಿ.ಹುಯಿಲಗೋಳ ಅವರನ್ನು ಶಾಲೆಗೆ ಆಹ್ವಾನಿಸಲಾಗಿತ್ತು, ಅವರು ವಿದ್ಯಾರ್ಥಿಗಳೊಂದಿಗೆ ಚಂದ್ರಯಾನ ೩ ರ ಕುರಿತು ಸುಧೀರ್ಘವಾಗಿ ವಿವರ ನೀಡಿದರು. ಅವರನ್ನು ಶಾಲಾ ಆಡಳಿತಮಂಡಳಿಯ ಸರ್ವ ಸದಸ್ಯರು ಸಾಧಕ ವಿಜ್ಞಾನಿಗಳನ್ನು ಸನ್ಮಾನಿಸಿ ಗೌರವಿಸಿದರು. ಶಾಲಾ ಆಡಳಿತ ಮಂಡಳಿಯ ಸಹ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ, ಉಪಾಧ್ಯಕ್ಷರಾದ ಶ್ರೀ ಡಿ.ಬಿ.ಓದುಗೌಡರ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಆರ್.ಎ.ದೇಸಾಯಿ, ಶ್ರೀ ಎನ್.ಆರ್.ಸಾವಕಾರ ಮತ್ತು ಶ್ರೀ ಎಮ್.ಡಿ.ದುರಗಣ್ಣವರ ರಾಜೇಶ್ವರಿ ವಿದ್ಯಾನಿಕೇತನದ ಅಕಾಡೆಮಿಕ ಕಮೀಟಿಯ ಚೇರಮನ್ನರಾದ ಪ್ರೋ: ಅನಿಲ ವೈದ್ಯ, ಪ್ರಾಚಾರ್ಯರಾದ ಶ್ರೀಮತಿ ಮಂಜುಳಾ ದಾನಿ, ಶಾಲಾ ರಜಿಸ್ಟಾçರ್ ಶ್ರೀ ವೈ.ಆರ್.ಶೆಟ್ಟಿ ಅವರು ಡಾ: ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ೭ನೆಯ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು. ಕುಮಾರಿ ನಾಝಿಯಾ ತಹಶಿಲ್ದಾರ, ಕುಮಾರಿ ಸಾಕ್ಷಿ ಬಂತಿ ಹಾಗೂ ಕುಮಾರಿ ಸೃಷ್ಠಿ ಹಂಚಿನಮನಿ ಸ್ವಾಗತಿಸಿದರೆ, ಯಶವಂತ ಬಳಗಾನೂರ ಅತಿಥಿಗಳ ಪರಿಚಯ ಮಾಡಿದರು. ಕುಮಾರಿ ವಿದ್ಯಾ ಮಂಟೂರ ಹಾಗೂ ಕುಮಾರಿ ಬಹಾ ಅಂಜುಮ್ ನದಾಫ್ ಕನ್ನಡದಲ್ಲಿ, ಕುಮಾರಿ ಸನಾ ಸೈಫನ್ನವರ ಹಾಗೂ ಸಂಭ್ರಮಾ ವಜ್ಜರಮಟ್ಟಿ ಹಿಂದಿಯಲ್ಲಿ, ಕುಮಾರ ಪೃಥ್ವಿ ಹುಲಿಹಳ್ಳಿ ಆಂಗ್ಲಭಾಷೆಯಲ್ಲಿ ಶಿಕ್ಷಕರ ದಿನಾಚರಣೆಯ ಮಹತ್ವ ಕುರಿತು ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕöÈತಿಕ ಕಾರ್ಯಕ್ರಮಗಳು ಜರುಗಿದವು. ಕುಮಾರಿ ಸಮನ್ವಿತಾ ರೆಡ್ಡಿ ಸಾಂಸ್ಕöÈತಿಕ ಕಾರ್ಯಕ್ರಮ ನಿರೂಪಿಸಿದರೆ, ಕುಮಾರ ಸಿದ್ಧಾರ್ಥ ಗೊಡಚಪ್ಪನವರ ಬಹುಮಾನ ವಿತರಣೆ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆ ಮೇಲೆ ಶ್ರೀ ಅನಿಲ ವೈದ್ಯ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಡಿ.ಬಿ.ಓದುಗೌಡರ, ಪ್ರಾಚಾರ್ಯರಾದ ಶ್ರೀಮತಿ ಮಂಜುಳಾ ದಾನಿ ಶಾಲಾ ರಜಿಸ್ಟಾçರ್ ಶ್ರೀ ವೈ.ಆರ್.ಶೆಟ್ಟಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಛೇರಿ ವ್ಯವಸ್ಥಾಪಕರಾದ ಶ್ರೀ ಚಂದ್ರಗೌಡ.ಬಿ.ಪಾಟೀಲ, ಹಿರಿಯ ಶಿಕ್ಷಕರಾದ ಶ್ರೀ ಸಿ.ಬಿ.ಹೊಳೆಯಣ್ಣವರ, ಹಿರಿಯ ಶಿಕ್ಷಕರಾದ ಶ್ರೀ ವಿ.ಎ.ರಾಯಭಟ್ಟನವರ ಶ್ರೀ ಪ್ರಕಾಶ ಸರಮೊಕದಮ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ ಸಾನ್ವಿ ಬಾಳಿಹಳ್ಳಿಮಠ ಹಾಗೂ ಕುಮಾರ ರೋಹಣ ಭದ್ರಶೆಟ್ಟಿ ನಿರೂಪಿಸಿದರೆ, ಕುಮಾರ ಚೇತನಾ ಸತ್ಯನ್ನವರ, ಕುಮಾರಿ ಚಾರ್ವಿ ರಡ್ಡೇರ ಹಾಗೂ ಕುಮಾರ ಮಾಹೀನ್ ತಂಬಾಕ ಅವರ ವಂದಾನಾರ್ಪಣೆಯೊAದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಶಾಲೆಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಯವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.