ಮೂಲ್ಕಿ: ಶಿಕ್ಷಕರು ಸಮಾಜ ಕಟ್ಟುವ ಶಿಲ್ಪಿಗಳು. ವಿದ್ಯಾರ್ಥಿಗಳ ಜೀವನ ರೂಪಿಸುವ ಮಾರ್ಗದರ್ಶಕರು. ಶಿಕ್ಷಕರ ತಾಳ್ಮೆ, ಪರಿಶ್ರಮ ಮತ್ತು ಪ್ರಾಮಾಣಿಕತೆಯ ಕಾರಣದಿಂದಲೇ ಉತ್ತಮ ನಾಗರಿಕರು, ವಿಜ್ಞಾನಿಗಳು, ವೈದ್ಯರು, ಇಂಜಿನಿಯರು, ಉದ್ಯಮಿಗಳು, ಆಡಳಿತಗಾರರು ಮೂಡಿಬರಲು ಸಾಧ್ಯವಾಗಿದೆ ಎಂದು ಮೂಲ್ಕಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ ತಿಳಿಸಿದರು.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಸಂಸ್ಕೃತ ವೇದ ಪಾಠಶಾಲೆಯಲ್ಲಿ ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ ಸಪರ್ಯಾ-2025 ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಮಾತನಾಡಿದರು. ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಸಂಸ್ಕೃತ ವೇದ ಪಾಠಶಾಲೆ ವೇದ ಅಧ್ಯಾಪಕ ಪಿ.ರವಿಪ್ರಕಾಶ್ ಉಪಾಧ್ಯಾಯ, ಜ್ಯೋತಿಷ್ಯ ಅಧ್ಯಾಪಕ ವೇದಮೂರ್ತಿ ಶಾಸ್ತ್ರಿ, ಸಂಸ್ಕೃತ ಅಧ್ಯಾಪಕ ಅಚ್ಯುತ ರಾವ್, ಆಗಮ ಶಾಸ್ತ್ರ ಅಧ್ಯಾಪಕರಾದ ನಾರಾಯಣ ಶರ್ಮ, ನವೀನ್ ಜನಾರ್ದನ ಭಟ್ ಹಾಗೂ ವಾಸ್ತು ಶಾಸ್ತ್ರ ಅಧ್ಯಾಪಕ ಸುಬ್ಬಯ್ಯ ಭಟ್ ವರ್ಮುಡಿ ಅವರನ್ನು ಅಭಿನಂದಿಸಲಾಯಿತು.
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಸಂಸ್ಕೃತ ವೇದ ಪಾಠಶಾಲೆ ಸಂಚಾಲಕ ಅತುಲ್ ವಿ.ಕುಡ್ವ, ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಪಾಂಡುರಂಗ ಭಟ್, ಸದಸ್ಯರಾದ ಹರಿ ಕಾಮತ್, ವಿ.ಶಿವರಾಮ ಕಾಮತ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಜನವಿಕಾಸ ಸಮಿತಿ ಮೂಲ್ಕಿ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಸದಸ್ಯರಾದ ಶೋಭಾ ರಾವ್, ಗೀತಾ ಶೆಟ್ಟಿ ಇದ್ದರು.
ದೇವಪ್ರಸಾದ್ ಪುನರೂರು ಪ್ರಸ್ತಾವನೆಗೈದರು. ಪ್ರಾಣೇಶ್ ಭಟ್ ವಂದಿಸಿ, ಶಿಮಂತೂರು ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಪ್ರಾಚಾರ್ಯ ಜಿತೇಂದ್ರ ವಿ.ರಾವ್ ಹೆಜಮಾಡಿ ನಿರೂಪಿಸಿದರು.