ಕುಶಾಲನಗರ:
ಕುಶಾಲನಗರ ತಾಲೂಕು ಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಲಾ ವಿದ್ಯಾರ್ಥಿಗಳು ಶುಕ್ರವಾರ ವಿಶೇಷವಾಗಿ ಆಚರಿಸಿದರು.
ಶಾಲೆಯಲ್ಲಿನ ಬ್ಯಾಂಡ್ ಸೆಟ್ ಬಾರಿಸಿ ಶಿಕ್ಷಕ ಸಮೂಹವನ್ನು ಸ್ವಾಗತಿಸಿ ಬರಮಾಡಿಕೊಂಡ ವಿದ್ಯಾರ್ಥಿಗಳು ಅವರಿಗೆಲ್ಲರಿಗೂ ತಾವೇ ಸಿದ್ಧಪಡಿಸಿದ್ದ ಹೂಗುಚ್ಛಗಳನ್ನು ನೀಡಿ ಸ್ವಾಗತಿಸಿದರು. ನಂತರ ವೇದಿಕೆಗೆ ಕರೆದೊಯ್ದು ಗುರುವಿನ ಮಹತ್ವ ಸಾರುವ ಸಾಲುಗಳನ್ನು ಬರೆದ ಗ್ರೀಟಿಂಗ್ ಕಾರ್ಡ್ಗಳೊಂದಿಗೆ ಪೆನ್ನು ಹಾಗೂ ಸಿಹಿ ಕೊಟ್ಟು ವಿದ್ಯಾರ್ಥಿಗಳು ಧನ್ಯತಾ ಭಾವ ಮೆರೆದರು.
ಮುಖ್ಯ ಶಿಕ್ಷಕಿ ಶಶಿಕಲಾ, ಶಿಕ್ಷಕರಾದ ಸೌಮ್ಯ, ಪ್ರಕಾಶ್, ಉದಯಪ್ರಕಾಶ್, ಸರೋಜಾ ಹಾಗೂ ಶೋಭಾ ಇದ್ದರು. ಇದೇ ಸಂದರ್ಭ ಶಾಲಾ ಮಕ್ಕಳು ಶಿಕ್ಷಕರ ದಿನದ ಕುರಿತು ಭಾಷಣ ಹಾಗೂ ಹಾಡುಗಳ ಮೂಲಕ ಗುರುವಿನ ಮಹತ್ವ ಕೊಂಡಾಡಿದರು.