ಧಾರವಾಡ: ತಾಲೂಕು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕ- ಶಿಕ್ಷಕಿಯರ ಪತ್ತು ಬೆಳೆಸುವ ಸಹಕಾರಿ ಸಂಘದ (ಟೀಚರ್ಸ್ ಸೊಸೈಟಿ) ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಬುಧವಾರ ಅವಿರೋಧವಾಗಿ ನಡೆಯಿತು. ಅಧ್ಯಕ್ಷ ಹುದ್ದೆಗೆ ಶಂಕರಪ್ಪ ಸಿದ್ದಪ್ಪ ಘಟ್ಟಿ ಹಾಗೂ ಉಪಾಧ್ಯಕ್ಷ ಹುದ್ದೆಗೆ ಅಲ್ಲಾಭಕ್ಷ ಹುಸೇನಸಾಬ ನದಾ-ï ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಜಿ.ಎ. ಬಣಕಾರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.