ವಿಜಯಪುರದ ಸರ್ಕಾರಿ ಪ್ರೌಢಶಾಲೆ ನಂ 26 ರಲ್ಲಿ ರೋಟರಿ ಸಂಸ್ಥೆಯಿಂದ ಶಿಕ್ಷಕರಿಗೆ ರಾಷ್ಟ್ರ ನಿಮಾತೃ ಪ್ರಶಸ್ತಿ ವಿತರಿಸಲಾಯಿತು. ಎಸ್.ವಿ. ಬುರ್ಲಿ, ಜಿ. ಎಸ್. ಕುಲಕರ್ಣಿ, ಆರ್,ಬಿ. ಬೆಳ್ಳಿ ಮತ್ತಿತರರಿದ್ದಾರೆ. 
ಜಿಲ್ಲೆ

ಶಿಕ್ಷಕರು ದೇಶದ ಸಂಪತ್ತು

ವಿಜಯಪುರ: ಪ್ರತಿ ವಿದ್ಯಾರ್ಥಿಗಳನ್ನು ಶಿಲ್ಪಿಗಳಾಗಿ ರೂಪಿಸುವ ಶಕ್ತಿ ಶಿಕ್ಷಕರಿಗಿದೆ. ಶಿಕ್ಷಕರು ದೇಶದ ಸಂಪತ್ತು. ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ವಿ. ಬುರ್ಲಿ ಹೇಳಿದರು.

ಇಲ್ಲಿನ ಜಲನಗರದಲ್ಲಿ ಸರ್ಕಾರಿ ಪ್ರೌಢಶಾಲೆ ನಂ 26ರಲ್ಲಿ ರೋಟರಿ ಸಂಸ್ಥೆ ವತಿಯಿಂದ ಮಂಗಳವಾರ ನಡೆದ ರಾಷ್ಟ್ರ ನಿಮಾತೃ ಪ್ರಶಸ್ತಿ ವಿತರಿಸಿ ಅವರು ಮಾರು ಮಾತನಾಡಿ, ತಮ್ಮ ಜ್ಞಾನದ ಮೂಲಕ ವಿದ್ಯಾರ್ಥಿಗಳ ಜೀವನ ಸುಂದರವಾಗಿಸಲು ಶ್ರಮಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ರೋಟರಿ ಸಂಸ್ಥೆ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ರೋಟರಿ ಸಂಸ್ಥೆ ಅಧ್ಯಕ್ಷ ಜಿ.ಎಸ್. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೇ ಉತ್ತಮ ಕಾರ್ಯ ನಿರ್ವಹಿಸುವ ಶಿಕ್ಷಕರಾದ ಅಶೋಕ ಆರ್. ದಶವಂತ, ಆರ್.ಜಿ. ಅರಗೆ ಮತ್ತು ಸಿ.ಆರ್. ಕುಲಕರ್ಣಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೃಷಿ ವಿವಿಯ ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಸಿಂಧೂರ, ಇಮಾಮ ಹುಲ್ಲೂರ, ಡಾ. ಎಸ್.ಎಸ್. ನಾಗಠಾಣ, ಕೃಷ್ಣಾ ಗುನ್ನಾಳಕರ, ರುದ್ರಗೌಡ ಪಾಟೀಲ, ರಾಕೇಶ ಜೋಶಿ, ಆನಂದ ಗುಜರಿ, ರಾಜೇಂದ್ರ ಜೋಶಿ, ಆಶಾ ಕನಮಡಿ, ಆರ್.ಬಿ. ಮಾಶ್ಯಾಳಿ, ಎನ್.ಎಂ. ಕಲಕೇರಿ, ಎಸ್.ವೈ. ಪಾಟೀಲ, ಎಸ್.ವೈ. ಗಜಾಕೋಶ, ಸುಜಾತಾ ಬೂದಿಹಾಳ, ಸಿಬ್ಬಂದಿ ವರ್ಗ ಮತ್ತಿತರರಿದ್ದರು.