ಬ್ರಹ್ಮಾವರ: ವೈದ್ಯರಿಲ್ಲದಿದ್ದರೆ ಆರೋಗ್ಯ ಹಾಳು, ಪೊಲೀಸರಿಲ್ಲದಿದ್ದರೆ ರಕ್ಷಣೆಯಿಲ.್ಲ ಇಂಜಿನಿಯರ್ ಇಲ್ಲದಿದ್ದರೆ ಟೆಕ್ನಾಲಜಿ ಇಲ್ಲ. ವಕೀಲರು ಇಲ್ಲದಿದ್ದರೆ ನ್ಯಾಯ ಇಲ್ಲ. ಆದರೆ ಇವರೆಲ್ಲರೂ ಆಗಲು ಶಿಕ್ಷಕರೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಹೇಳಿದರು.
ಶುಕ್ರವಾರ ಶ್ಯಾಮಿಲಿ ಶನಾಯಿ ಸಭಾಭವನದಲ್ಲಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಬ್ರಹ್ಮಾವರ ವಲಯ, ಮಣೂರು ಕೋಟ ಗೀತಾನಂದ ಫೌಂಡೇಶನ್ ವತಿಯಿಂದ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಗೀತಾನಂದ ೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರು, ಸಾಧಕ ಶಿಕ್ಷಕರನ್ನು ಗೌರವಿಸಲಾಯಿತು. ರಮ್ಯಾ ಅವರಿಂದ ಯೋಗಾಸನ ಪ್ರದರ್ಶನ ಜರುಗಿತು.
ಬ್ರಹ್ಮಾವರ ತಾಪಂ ಕಾರ್ಯನಿರ್ವಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ, ವಾಜಿ ಶಾಸಕ ಕೆ.ರುಪತಿ ಭಟ್, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ,ರಾಜಾ ರಾಮಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ಶಿಕ್ಷಣ ಇಲಾಖೆಯ ಅಶೋಕ್ ಕಾಮತ್, ಲೋಕೇಶ್ ಸಿ., ಪ್ರಕಾಶ್ ಬಿ.ಬಿ.ಅಂಪಾರು, ದಿನಕರ ಶೆಟ್ಟಿ, ಶಿಕ್ಷಕರ ಸಂದ ಪಧಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಂ ಪ್ರಾಸ್ತಾವಿಕವಾಗಿ ವಾತನಾಡಿದರು. ಶಶಿಧರ ಶೆಟ್ಟಿ, ಸತೀಶ್ ಶೆಟ್ಟಿ ಚಿತ್ರಪಾಡಿ, ದೀಪಾ ಕಾರ್ಯಕ್ರಮ ನಿರೂಪಿಸಿದರು.