ತಿಕೋಟಾ: ಶಿಕ್ಷಕರು ದೇಶ ಕಟ್ಟುವ, ಸೃಜನಶೀಲ ಸಮಾಜ ನಿರ್ಮಿಸುವ ಮಾನವೀಯ ಮೌಲ್ಯಗಳಿಗೆ ಮನ್ನಣಿ ನೀಡುವ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಪಿಸುವ ಕೆಲಸವನ್ನು ಸದಾ ಮಾಡುತ್ತಿರಬೇಕು. ಕತ್ತಲಿನಿಂದ ಬೆಳೆಕಿನೆಡೆಗೆ ತಂತ್ರಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ಗುರು ಎಂದು ಎ.ಬಿ. ಬಿರಡಿ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ನಿವೃತ್ತರಾದ ಪ್ರಾಚಾರ್ಯ ಆರ್.ಬಿ. ಶಿರಸಂಗಿ ಹಾಗೂ ಕಚೇರಿ ಸಹಾಯಕಿ ಮಲ್ಲಮ್ಮ ವಿಭೂತಿ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಡಳಿತಾಧಿಕಾರಿ ವಿಲಾಸ ಬಗಲಿ ಮಾತನಾಡಿದರು.
ಪ್ರೊ. ಎಂ.ಆರ್. ಹುಗಾರ, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಮಂಜುನಾಥ ಬಿದರಿ, ಹಣಮಂತ ಪವಾರ, ಸಿದ್ದಪ್ಪ ಮಾದರ, ದರೇಪ್ಪ ಸಿದ್ನಾಥ ಇದ್ದರು.