ಹಗರಿಬೊಮ್ಮನಹಳ್ಳಿ ಪಟ್ಟಣದ ಗುರುಭವನದಲ್ಲಿ ಪ್ರಾಥಮಿಕ ಮಾಧ್ಯಮಿಕ ಶಾಲಾ ರಾಜ್ಯ ಎಸ್‌ಸಿಎಸ್‌ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಸೋಮಶೇಖರ, ಪ್ರಮುಖರಾದ ಎಚ್.ಕೊಟ್ರಪ್ಪ, ಮೈಲಪ್ಪ, ಯು.ರಾಮಕೃಷ್ಣ, ಹಿರ್ಯನಾಯ್ಕ, ಕೆ.ಮಲ್ಲಿಕಾರ್ಜುನ ಇತರರಿದ್ದರು. 
ಜಿಲ್ಲೆ

ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Kopala - Desk - Eraveni

ಹಗರಿಬೊಮ್ಮನಹಳ್ಳಿ: ಪಟ್ಟಣದ ಗುರುಭವನದಲ್ಲಿ ಪ್ರಾಥಮಿಕ ಮಾಧ್ಯಮಿಕ ಶಾಲಾ ರಾಜ್ಯ ಎಸ್‌ಸಿಎಸ್‌ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಪದಾಧಿಕಾರಿಗಳ ಆಯ್ಕೆ ಶುಕ್ರವಾರ ಜರುಗಿತು.

ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಸೋಮಶೇಖರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬಳಿಕ ಟಿ.ಸೋಮಶೇಖರ ಮಾತನಾಡಿ, ಸಮುದಾಯದ ಶಿಕ್ಷಕರ ಸಂಘಟನೆ ಮಾಡಿಕೊಂಡಿರುವುದು, ವಿಶೇಷವಾಗಿ ಕಾರ್ಯಕ್ರಮಗಳ ನಿರ್ವಹಣೆ, ಸಮಾಜಮುಖಿ ಕೆಲಸಗಳಲ್ಲಿ ಪಾಲ್ಗೊಳ್ಳುವುದು.

ಎಲೆ ಮರೆಯ ಕಾಯಿಯಂತಿರುವವರನ್ನು ಗುರುತ್ತಿಸುವದು ಎಂದೆಲ್ಲ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು. ಇದಕ್ಕೆ ತಾಲೂಕು ಪದಧಿಕಾರಿಗಳು ಸಹಕರಿಸಬೇಕು, ಜೊತೆಗೆ ಸೂಕ್ಷ್ಮವಾಗಿ ಘಟಕಕ್ಕೆ ಯಾವುದೇ ಕಪ್ಪುಚುಕ್ಕಿ ಬಾರದಂತೆ ನಿರ್ವಹಿಸಬೇಕು ಎಂದರು.

ಆರ್.ಮೀಠ್ಯಾನಾಯ್ಕ (ಅಧ್ಯಕ್ಷ), ಟಿ.ಮಾರುತಿ(ಪ್ರಧಾನ ಕಾರ್ಯದರ್ಶಿ), ವಿ.ಪಿ.ಶೇಖರ(ಉಪಾಧ್ಯಕ್ಷ), ಬಿ.ರಾಮಣ್ಣ(ಖಜಾಂಚಿ), ಕೆ.ಗಾಳೆಪ್ಪ(ಸಹಕಾರ್ಯದರ್ಶಿ), ಸಿ.ಜಗದೀಶ, ಎಲ್.ಕೃಷ್ಣನಾಯ್ಕ, ಜಿ.ಆರ್.ದಯಾನಂದ, ಎಸ್.ಎಲ್.ಮಲ್ಲಪ್ಪ (ಸಂಘಟನಾ ಕಾರ್ಯದರ್ಶಿಗಳು) ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮಾಜಿ ತಾಲೂಕು ಅಧ್ಯಕ್ಷ ಎಚ್.ಕೊಟ್ರಪ್ಪ, ಪತ್ತಿನ ಸಹಕಾರ ಸಂಘದ ನಿರ್ದೇಶಕ ಮೈಲಪ್ಪ, ಗುರುಭವನ ಸಮಿತಿ ಸದಸ್ಯ ಯು.ರಾಮಕೃಷ್ಣ, ಸಂಘದ ಜಿಲ್ಲಾ ಖಜಾಂಚಿ ಹಿರ್ಯನಾಯ್ಕ, ಗೌರವಾಧ್ಯಕ್ಷ ಕೆ.ಮಲ್ಲಿಕಾರ್ಜುನ ಪ್ರಮುಖರಾದ ನವೀನ್ ಕೃಷ್ಣ, ಮೋಹನ್ ಅಣಜಿ, ಕೊಟ್ರೇಶ್, ಎಲ್.ರೆಡ್ಡಿನಾಯ್ಕ, ನಾರಾಯಣನಾಯ್ಕ, ರಾಮನಾಯ್ಕ, ಯಂಕನಾಯ್ಕ, ಬಸವರಾಜ, ಮೋಟ್ಲಾನಾಯ್ಕ ಇದ್ದರು.