ಜಿಲ್ಲೆ

ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ

ಕೊಟ್ಟೂರು: ಪಟ್ಟಣದ ರೇಣುಕಾ ಬಡಾವಣೆಯಲ್ಲಿ ಶಿಕ್ಷಕರೊಬ್ಬರ ಮನೆ ಬೀಗ ಮುರಿದು 12.68 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ 2 ಲಕ್ಷ ರೂ. ಕಳ್ಳತನ ಮಾಡಲಾಗಿದೆ. ಶಿಕ್ಷಕ ಜಿ.ಕರೇಗೌಡ ಅವರ ಮನೆ ಕಳ್ಳತನವಾಗಿದೆ.

30.5 ತೊಲ ಚಿನ್ನ, 550 ಗ್ರಾಂ ಬೆಳ್ಳಿ ಹಾಗೂ 2 ಲಕ್ಷ ರೂ. ದೋಚಲಾಗಿದೆ. ಶಾಲಾ ರಜೆ ಇದ್ದುದ್ದರಿಂದ ಮಾ.13ರಂದು ಕುಟುಂಬ ಸಮೇತರಾಗಿ ಊರಿಗೆ ತೆರಳಿದ್ದರು. 18ರಂದು ಮನೆ ಬಂದಾಗ, ಕಳ್ಳತನವಾಗಿರುವುದು ತಿಳಿದಿದೆ. ಘಟನಾ ಸ್ಥಳಕ್ಕೆ ಎಸ್ಪಿ ಹರಿಬಾಬು ಸೇರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳದಿಂದ ಮನೆ ತಪಾಸಣೆ ಮಾಡಲಾಯಿತು. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.