ಜಿಲ್ಲೆ

ಬೋಧನೆಯಿಂದ ಶಿಕ್ಷಕನಲ್ಲಿ ಆತ್ಮತೃಪ್ತಿ

Davangere - Desk - Mahesh Babu E

ಹೊಳಲ್ಕೆರೆ: ಆಸ್ತಿ, ಹಣ ಗಳಿಕೆಗಿಂತಲೂ ಬೋಧನೆಯಿಂದ ಮಾತ್ರ ಶಿಕ್ಷಕನಿಗೆ ಆತ್ಮತೃಪ್ತಿ ಸಿಗಲಿದೆ ಎಂದು ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ಹೇಳಿದರು.

ತಾಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಬಿ.ಇಡಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.

ನಿರಂತರ ಓದು, ಅಧ್ಯಯನದಿಂದ ಮಾತ್ರ ವಿದ್ಯಾರ್ಥಿಗಳ ಮನಗೆಲ್ಲುವ ರೀತಿ ಬೋಧನೆ ಮಾಡಲು ಸಾಧ್ಯ. ಈ ಸತ್ಯವನ್ನು ಅರಿತು ಶಿಕ್ಷಕರು ವಿದ್ಯಾರ್ಥಿ ರೀತಿ ಕಲಿಕೆಯಲ್ಲಿ ತೊಡಗಬೇಕು ಎಂದರು.

ಪ್ರೊ.ಜೆ.ರಘುನಾಥ್ , ಪ್ರಶಿಕ್ಷಣಾರ್ಥಿಗಳಾದ ಸುದರ್ಶನ್, ಪವನ್ ಮಾತನಾಡಿದರು.