ಜಿಲ್ಲೆ

ಶಿಕ್ಷಕಿ ಶಶಿಕಲಾಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ನರೇಗಲ್ಲ: ಪಟ್ಟಣದ ನಿವಾಸಿ, ಶಿಕ್ಷಕಿ ಶಶಿಕಲಾ ಕುಲಕರ್ಣಿಯವರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ದೊರಕಿದೆ.

ಬೆಂಗಳೂರಿನಲ್ಲಿ ಇತ್ತೀಚೆೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಶಿಕ್ಷಕಿ ಶಶಿಕಲಾ ಅವರು ಪ್ರಶಸ್ತಿ ಸ್ವೀಕರಿಸಿದರು.

ಕತೆ, ಕವನ, ಹನಿಗವನಗಳ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶಿಕ್ಷಕಿ ಶಶಿಕಲಾ ಒಬ್ಬ ಉತ್ತಮ ಭಾಷಣಗಾರ್ತಿಯೂ ಆಗಿದ್ದಾರೆ. ನಾಡಿನ ವಿವಿಧೆಡೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿ, ಸೈ ಎನ್ನಿಸಿಕೊಂಡಿದ್ದಾರೆ. ಅಲ್ಲದೆ, ಅನೇಕ ಪ್ರಶಸ್ತಿ, ಬಹುಮಾನಗಳಿಗೂ ಭಾಜನರಾಗಿದ್ದಾರೆ.