ಪಾಂಡವಪುರ: ಪಟ್ಟಣದ ಶಿಕ್ಷಕರ ಭವನದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಡಿ.ಹಲಗೇಗೌಡರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ವಿಶಿಷ್ಟ ಸೇವಾ ಪ್ರಶಸ್ತಿ ಹಾಗೂ ಗುರು ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ.ವಿಜಯಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಶಿಕ್ಷಕರ ಪ್ರತಿಭಾ ಪರಿಷತ್ ಪ್ರಶಸ್ತಿ ವಿಚಾರದಲ್ಲಿ ಯಾವುದೇ ಲಾಬಿಗೆ ಮಣಿಯದೆ ಉತ್ತಮ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಮೂಲಕ ಶಿಕ್ಷಕರು ಇನ್ನೂ ಹೆಚ್ಚಿನ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಪ್ರೋತ್ಸಾಯಿಸುತ್ತಿದೆ ಎಂದು ಹೇಳಿದರು.
ಶಿಕ್ಷಕರಾದ ಸತ್ಯಭಾಮ, ಆರೋಕ್ಯಮೇರಿ, ಮಹಾಲಕ್ಷ್ಮೀ, ಜಿ.ಶುಭಾ, ಎಚ್.ಎಂ.ಬಸವರಾಜು, ಅಂತೋಣಿಮೇರಿ, ಪುಷ್ಪಾ, ನಾಗವೇಣಿ, ರತ್ನಶ್ರೀ, ದೇವರಾಜು, ಹೇಮಾವತಿ, ಕೆಂಚೇಗೌಡ, ಪ್ರೇಮಕುಮಾರಿ, ಶಶಿಕಲಾ, ಲಕ್ಷ್ಮೀ, ಶಂಕರೇಗೌಡ, ಪ್ರಭಾವತಮ್ಮ, ಡಿ.ಎನ್.ನಂದೀಶ್, ವಿ.ಪದ್ಮಾವತಿ, ಮಹದೇವಪ್ಪ, ನಾಗೇಗೌಡ, ಜಗದೀಶ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪರಿಷತ್ ರಾಜ್ಯಾಧ್ಯಕ್ಷ ಪಿ.ಮಹೇಶ್, ತಾಲೂಕು ಅಧ್ಯಕ್ಷ ಎಚ್.ಎನ್.ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಅಧ್ಯಕ್ಷ ಪಿ.ಮಂಜುನಾಥ್, ಕಾರ್ಯದರ್ಶಿ ಎಂ.ಡಿ.ಕುಮಾರ್, ಖಜಾಂಚಿ ಜೆ.ನಾಗರಾಜು, ನಿರ್ದೇಶಕರಾದ ಮಂಜುಳಾ, ಕೆ.ಸುಮಂಗಲ, ಸಾವಿತ್ರಿ ಬಾಯಿಫುಲೆ ಸಂಘದ ಅಧ್ಯಕ್ಷೆ ಎಚ್.ಆರ್.ಲತಾ, ಶಿಕ್ಷಕರಾದ ಸುರೇಂದ್ರಕುಮಾರ್, ಬಿ.ಡಿ.ಇಂದ್ರಕುಮಾರಿ ಇತರರು ಇದ್ದರು.