ಅನುಸೂಯ ಜಹಗೀರದಾರ 
ಜಿಲ್ಲೆ

ಶಿಕ್ಷಕಿ ಅನುಸೂಯ ಗಜಲ್‌ಗಳು ವಿವಿ ಪಠ್ಯಕ್ಕೆ ಆಯ್ಕೆ

ಯಲಬುರ್ಗಾ: ತಾಲೂಕಿನ ಬೇವೂರು ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕಿ ಅನುಸೂಯ ಜಹಗೀರದಾರ ಅವರ ಎರಡು ಗಜಲ್‌ಗಳು ನೆರೆ ರಾಜ್ಯ ಮಹಾರಾಷ್ಟ್ರದ ಎರಡು ವಿವಿಗಳ ಪಠ್ಯಕ್ಕೆ ಆಯ್ಕೆಯಾಗಿವೆ. ಕೊಲ್ಲಾಪುರದ ಶಿವಾಜಿ ವಿವಿಯ ಬಿಎ 2ನೇ ವರ್ಷ, ಸೊಲ್ಲಾಪುರದ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳ್ತರ್ ವಿವಿ ಬಿಕಾಂ 3ನೇ ವರ್ಷ ಹಾಗೂ ಬಿವಿಎ (ಬ್ಯಾಚಲರ್ ಆಫ್ ವಿಸ್ಯುಅಲ್ ಆರ್ಟ್ಸ್) 3ನೇ ಸೆಮಿಸ್ಟರ್‌ಗೆ ಸೇರಿ ಎರಡು ವಿವಿಯ ಮೂರು ವಿಭಾಗಗಳಲ್ಲಿ 2025-26ನೇ ಸಾಲಿನಿಂದ ಪಠ್ಯಕ್ಕೆ ಆಯ್ಕೆಯಾಗಿವೆ ಎಂದು ಗಜಲ್ ಧಾರೆ ಪಠ್ಯ ಪುಸ್ತಕದ ಪ್ರಧಾನ ಸಂಪಾದಕ ಡಾ.ಸಿದ್ದರಾಮ ಹೊನ್ನಲ್ ಹಾಗೂ ಶಿವಾಜಿ ವಿವಿ ಕನ್ನಡ ಅಭ್ಯಾಸ ಮಂಡಳಿ ಅಧ್ಯಕ್ಷ ಡಾ.ಗುರುಸಿದ್ದಯ್ಯ ಸ್ವಾಮಿ ತಿಳಿಸಿದ್ದಾರೆ.

ಒಟ್ಟು 50 ಗಜಲ್ ಕಾರರ 100 ಗಜಲ್ಗಳು ಈ ಪಠ್ಯದಲ್ಲಿವೆ. ಅನುಸೂಯಾ ಅವರು ಪ್ರಸಿದ್ಧ ಕಥೆಗಾರ್ತಿಯಾಗಿ ಹನಿಗವನ, ಕಾವ್ಯ, ಗಜಲ್ ಸೇರಿ ಆರು ಪುಸ್ತಕಗಳನ್ನು ಬರೆದಿದ್ದಾರೆ. ಹಿಂದುಸ್ಥಾನಿ ಸಂಗೀತ ಕಲಾವಿದೆ, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿ ಆಗಿದ್ದಾರೆ. ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2007ರಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಮಟ್ಟದ ಉತ್ತಮ ವಿಶೇಷ ಶಿಕ್ಷಕಿ ಪ್ರಶಸ್ತಿ ಲಭಿಸಿದೆ.