ಕಂಪ್ಲಿ ತಹಸಿಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ಶಿವರಾಜ ಮಾತನಾಡಿದರು. ನಿಲಯ ಪಾಲಕ ಕೆ.ವಿರೂಪಾಕ್ಷಿ, ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ, ಕಂದಾಯ ಇಲಾಖೆ ಸಿಬ್ಬಂದಿ ಮಾಲತೇಶ ದೇಶಪಾಂಡೆ, ಜಿಲಾನ್, ಶಿವರುದ್ರಪ್ಪ, ಕೆ.ಮಂಜುನಾಥ, ಮೌನೇಶ್, ಪ್ರಮುಖರಾದ ಬಿ.ಎಂ.ರುದ್ರಯ್ಯ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ಅಕ್ಕನ ವಚನಗಳನ್ನು ಕಲಿಸಿ

ಕಂಪ್ಲಿ: ಅಕ್ಕಮಹಾದೇವಿ ಸ್ತ್ರೀ ಸಮಾನತೆಗೆ ಧ್ವನಿ ಎತ್ತಿದ ಮಹಿಳೆಯರಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಹಸೀಲ್ದಾರ್ ಎಸ್.ಶಿವರಾಜ ಹೇಳಿದರು. ನಗರದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಕ್ಕನ ವಚನ ಸಾಹಿತ್ಯ ಸರಳ-ಸಜ್ಜನಿಕೆ ಮತ್ತು ನಿರ್ಭೀತ ಜೀವನಕ್ಕೆ ಪ್ರೇರಣೆ. ವಚನಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಅಕ್ಕನ ತತ್ವಾದರ್ಶಗಳನ್ನು ರೂಢಿಸಬೇಕು ಎಂದರು.