ರಬಕವಿ ಪದ್ಮಾವತಿ ವಿದ್ಯಾಲಯದ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಜಾರೆ ಹರ್ಷೋತ್ಸವ-2 ಸಮಾರಂಭಕ್ಕೆ ಅರ್ಥಶಾಸ್ತ್ರ ತಜ್ಞ ನಿವೃತ್ತ ಪ್ರೊ. ಎಂ. ಎಸ್. ಬಾದಾಮಿ ಚಾಲನೆ ನೀಡಿದರು. ಹುಲ್ಯಾಳ ಗುರುದೇವಾಶ್ರಮದ ಶ್ರೀ ಹರ್ಷಾನಂದ ಶ್ರೀಗಳು, ಸತೀಶ ಹಜಾರೆ ಇದ್ದರು. 
ಜಿಲ್ಲೆ

ಮಕ್ಕಳಿಗೆ ಸಂಸ್ಕಾರ ಕಲಿಸಿ

Vijayapura - Desk - Gurappa Lokuri

ರಬಕವಿ/ಬನಹಟ್ಟಿ: ಪಾಲಕರಾದವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರಮುಖ ಕಾರಣ. ಶಾಲೆಗಳು ವಿದ್ಯೆ ಕೊಡುತ್ತವೆ. ಆದರೆ, ಬುದ್ಧಿಯನ್ನು ಮನೆಗಳಲ್ಲಿ ಪಾಲಕರು ಕೊಡಬೇಕೆಂದು ಅರ್ಥಶಾಸ್ತ್ರಜ್ಞ ನಿವೃತ್ತ ಪ್ರೊ. ಎಂ. ಎಸ್. ಬಾದಾಮಿ ಹೇಳಿದರು.

ರಬಕವಿ ಪದ್ಮಾವತಿ ವಿದ್ಯಾಲಯದ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಜಾರೆ ಹರ್ಷೋತ್ಸವ-2 ಸಮಾರಂಭಕ್ಕೆ ಶನಿವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, ಪಾಲಕರು ಕೇವಲ ಹೆರುವುದಷ್ಟೆ ಆಗಬಾರದು. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಕೆಲಸವಾಗಬೇಕು. ಮಕ್ಕಳಿಗೆ ನೀವು ಪಾಲಕರಾಗಬೇಕೆ ವಿನಃ ಪೊಲೀಸರಾಗಬಾರದು ಎಂದು ಹೇಳಿದರು.

ಹುಲ್ಯಾಳ ಗುರುದೇವಾಶ್ರಮದ ಶ್ರೀ ಹರ್ಷಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳಲ್ಲಿರುವ ನಿಜವಾದ ಪ್ರತಿಭೆ ಗುರುತಿಸಿ ಪಾಲಕರು ಪ್ರೋತ್ಸಾಹಿಸಬೇಕು. ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಲು ಸಾಧ್ಯ. ಪಾಲಕರು ಸಹ ಮಕ್ಕಳಿಗೆ ಸಂಸ್ಕಾರ ಕಲಿಸಲು ತಮ್ಮ ಪಾತ್ರ ನಿರ್ವಹಿಸಬೇಕು ಎಂದರು.

ಸಂಸ್ಥೆ ಸಂಸ್ಥಾಪಕ ಸತೀಶ ಹಜಾರೆ, ಪದ್ಮಾವತಿ ಹಜಾರೆ, ಪ್ರಭಾವತಿ ಗಣಪತರಾವ ಹಜಾರೆ, ಬೀರಪ್ಪ ಗಡದಿ, ಕಾಡೇಶ ಕೊಲೂರು, ಬಿ.ಎಂ. ಹಳಮನಿ, ಮಾರುತಿ ನಾಯಕ, ಪ್ರಭು ದೊಡ್ಡಯಮನಪ್ಪ ನಾಯಕ, ನಾಗರಾಜ ಕಾಡಾಪುರ, ಮಂಜು ಹುಕ್ಕೇರಿ, ಬಸವರಾಜ ಕಲಾದಗಿ, ಶ್ರೀಶೈಲ ಕುಂಬಾರ ಇತರರಿದ್ದರು.