ಹೂವಿನಹಡಗಲಿ: ಪೌರಾಣಿಕ ಹಿನ್ನೆಲೆ ಹೊಂದಿರುವ ಮಾನ್ಯರ ಮಸಲವಾಡ ಗ್ರಾಮದಲ್ಲಿ ಶಕ್ತಿದೇವತೆಗಳು ನೆಲೆಸಿದ್ದಾರೆ ಎಂದು ನೀಲಗುಂದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಹೇಳಿದರು.
ಮಾನ್ಯರ ಮಸಲವಾಡ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾದಲ್ಲಿ ಬುಧವಾರ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಗ್ರಾಮಸ್ಥರು ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಕಟ್ಟಿಕೊಡುವ ಕೆಲಸ ಮಾಡುತ್ತಿದ್ದಾರೆ. ನಿಂತುಹೋಗಿದ್ದ ಪ್ರವಚನ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿದ್ದಾರೆ. ಕೊಗಳಿ ವೀರಪ್ಪಜ್ಜ ಅವರು ಗ್ರಾಮಸ್ಥರಿಗೆ ಭಕ್ತಿಯ ಪರಂಪರೆ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆ ಸಂಸ್ಕೃತಿ ಬಗ್ಗೆ ತಿಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಧರ್ಮಕರ್ತ ಕೊಗಳಿ ವೀರರಾಜ, ನಿವೃತ್ತ ಮುಖ್ಯಶಿಕ್ಷಕ ವೀರಯ್ಯ, ಪ್ರಮುಖರಾದ ಬಸಪ್ಪ, ಕೊಟ್ರೇಶ ಬಾಗಳಿ, ಬೀದರಹಳ್ಳಿ ಕೊಟ್ರೇಶ್, ಆದಿಮನಿ ಬಸವರಾಜ, ಕೊಟಗಿ ವೀರಣ್ಣ, ಬೀದರಹಳ್ಳಿ ವೀರಪ್ಪ, ಗಡ್ಡಿ ನಾಗರಾಜ, ಬಸವರಾಜ, ಡಂಬಳ ನಾಗರಾಜ ಇತರರಿದ್ದರು.