ತಾಲೂಕು ಬ್ರಾಹ್ಮಣ ಮಹಾಸಭಾ ಸರ್ವ ಸದಸ್ಯರ ಸಭೆಯಲ್ಲಿ ಶಸ್ತç ಚಿಕಿತ್ಸಕ ಡಾ.ಕಮ್ಮಚ್ಚಿ ಅರವಿಂದ್ ಅವರನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ಮುಂದಿನ ಪೀಳಿಗೆಗೂ ಬ್ರಾಹ್ಮಣ್ಯ ಸಂಸ್ಕಾರ ಕಲಿಸಿ

Shivamogga - Desk - Megha MS

ಹೊಸನಗರ: ಮನೆಯಲ್ಲಿ ಬ್ರಾಹ್ಮಣ್ಯ ಸಂಸ್ಕಾರವನ್ನು ಮುಂದಿನ ಪೀಳಿಗೆಗೂ ಕಲಿಸಿ, ಮುಂದುವರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ.ರಾಮಚಂದ್ರ ರಾವ್ ಹೇಳಿದರು.

ನಗರದ ಗಾಯತ್ರಿ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಹೆಣ್ಣು ಸಂತಾನ ಕ್ಷೀಣಿಸುತ್ತಿದೆ. ಆದರೆ ಹೆಣ್ಣು ಮಗು ಎಂದು ಕಡೆಗಣಿಸುವವರ ಕಾಲ ಈಗಿಲ್ಲ. ಗಾಯತ್ರಿ ಮಂದಿರದಲ್ಲಿ ಗಾಯತ್ರಿ ದೇವಿಯ ದೇಗುಲ ನಿರ್ಮಾಣವಾಗಬೇಕಿದೆ. ಜತೆಗೆ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರನ್ನೂ ಪ್ರತಿಷ್ಠಾಪಿಸಬೇಕು. ಅದಕ್ಕಾಗಿ ಎಲ್ಲರೂ ತನು, ಮನ, ಧನ ಸಹಾಯ ಮಾಡಬೇಕು ಎಂದು ಕೋರಿದರು.
ಈ ವೇಳೆ ಶಸ್ತç ಚಿಕಿತ್ಸಾ ತಜ್ಞ ಡಾ.ಕಮ್ಮಚ್ಚಿ ಅರವಿಂದ್ ಹಾಗೂ ಅಡುಗೆ ತಯಾರಕ ಶಿವರಾಮ ಭಟ್ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಗೋಳಿಮನೆ ಗೋಪಾಲ ಉಡುಪ, ವ್ಯವಸ್ಥಾಪಕ ಕೃಷ್ಣಮೂರ್ತಿ, ಕಾರ್ಯದರ್ಶಿ ಸ್ವರೂಪ, ಗಣೇಶ್ ಸೇರಿ ಸಂಘದ ನಿರ್ದೇಶಕರು ಇದ್ದರು.