ಕೊಪ್ಪ: 1991ರಲ್ಲಿ ಕಾರ್ಮಿಕರೇ ಮಾಲೀಕರಾಗಿ ಪ್ರಾರಂಭಿಸಿದ ಸಹಕಾರ ಸಾರಿಗೆ (ಟಿಸಿಎಸ್) ಎಂಬ ಸಂಸ್ಥೆ ಏಷ್ಯದ ಮೊದಲ ಸಹಕಾರ ತತ್ವದಡಿ ನಿರ್ಮಾಣವಾದ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇಂತಹ ಸಹಕಾರ ಸಾರಿಗೆ ಕಳೆದ ನಾಲ್ಕು ವರ್ಷದಿಂದ ಅರ್ಥಿಕ ಸಂಕಷ್ಟಕ್ಕೆ ಒಳಗಾಗಿ ತನ್ನ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಿತ್ತು, ಆದರೆ ಸರ್ಕಾರ ಟಿಇಎಸ್‌ನ 65 ಬಸ್‌ಗಳಿಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಭರವಸೆ ನೀಡಿದರುವುದು ಸಹಕಾರ ಸಾರಿಗೆ ಸಂಸ್ಥೆ ನೌಕರರಲ್ಲಿ ಮತ್ತೆ ಸಂಸ್ಥೆ ಮರು ಆರಂಭದ ಆಸೆ ಚಿಗುರೊಡೆದಿದೆ.
90ರ ದಶಕದಲ್ಲಿ ಕಾರ್ಮಿಕರಿಂದ ಹುಟ್ಟಿ, ಮಲೆನಾಡು ಭಾಗದಲ್ಲಿ ಗುಡ್ಡಗಳನ್ನು ಸುತ್ತಿದ ಸಹಕಾರ ಸಾರಿಗೆ ಮಾಲೆನಾಡಿಗರ ಮನೆ ಮಾತಾಗಿತ್ತು. ಹಣ ದುಬ್ಬರ, ಡಿಸೇಲ್, ಕಚ್ಚಾ ತೈಲಾ, ವಿಮೆ, ಬೆಲೆಏರಿಕೆ ಕಾರಣಗಳಿಂದ 2021ರ ಫೆ.13ರಂದು ಸಂಸ್ಥೆ ಸ್ಥಗಿತಗೊಂಡಿತ್ತು.
ಸಂಸ್ಥೆ ಸ್ಥಗಿತಗೊಂಡ ನಂತರದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಸರ್ಕಾರಗಳು ಸಂಸ್ಥೆ ಪುನಶ್ಚೇತನಗೊಳಿಸಲು ಭರವಸೆಗಳನ್ನು ನೀಡುತ್ತಿದ್ದವು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಹಕಾರ ಸಾರಿಗೆ ಉಳಿಸುವ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನಗಳು ನಡೆದಿತ್ತು, ಅದರೆ ಅದುಫಲ ಕೊಡಲಿಲ್ಲ. ಇದೇ ವೇಳೆಯಲ್ಲಿ ಕಾರ್ಮಿಕರು ಚಿಕ್ಕಮಗಳೂರು ಜಿಲ್ಲಾ ಟ್ರಾನ್ಸ್‌ಪೋರ್ಟ್ ಆಂಡ್ ಜನರಲ್ ಮಜ್ದೂರ್ ಸಂಘದ ಹೆಸರಿನಲ್ಲಿ ಸರ್ಕಾರಗಳ ಗಮನ ಸೆಳೆಯಲು ವಿವಿಧ ಹೋರಾಟ ಹಾಗೂ ನ್ಯಾಯಾಲಯದ ಮೆಟ್ಟಿಲೇರಿತ್ತು.
ಚಿಕ್ಕಮಗಳೂರು ಜಿಲ್ಲಾ ಟ್ರಾನ್ಸ್‌ಪೋರ್ಟ್ ಆಂಡ್ ಜನರಲ್ ಮಜ್ದೂರ್ ಸಂಘದ ನೇತೃತ್ವದಲ್ಲಿ ನಡೆದ ಹೋರಾಟದಿಂದ ಸಹಕಾರ ಸಾರಿಗೆ ಸಂಸ್ಥೆಗೆ ಹೊಸ ಆಡಳಿತ ಮಂಡಳಿ ರಚನೆಗೊಂಡಿತ್ತು. ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪುಷ್ಪವತಿ ಆಯ್ಕೆಯಾಗಿದ್ದರು. ಸಹಕಾರಿ ತತ್ವದಡಿಯಲ್ಲಿ ಸಹಕಾರ ಸಾರಿಗೆ ಸಂಸ್ಥೆ ನಡೆಸಲಾಗುತ್ತಿದೆ. ಅರ್ಥಿಕ ಸಂಕಷ್ಟ ಒಳಗಾಗಿ 300 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಸಂಸ್ಥೆ ಪುನಶ್ಚೇತನಗೊಳಿಸಲು ಸರ್ಕಾರದಿಂದ ಬಸ್‌ಗಳ ಮೇಲಿನ ತೆರಿಗೆ ವಿನಾಯಿತಿ ದೊರಕಿಸಿಕೊಡಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಬಸ್‌ಗಳ ಮೂಲಕ ಸಹಕಾರ ತತ್ವದಡಿಯಲ್ಲಿ ತೆರಿಗೆ ವಿನಾಯಿತಿ ಸರ್ಕಾರಕ್ಕೆ ಆದೇಶ ನೀಡಿದೆ.