ಮಂಗಳೂರು : ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಕರ್ನಾಟಕ ಸರ್ಕಾರದ ಪ್ರಾಯೋಜಿತ ಸ್ವಾಯತ್ತ ಸಂಸ್ಥೆಯಾದ ಐಟಿ ಶಿಕ್ಷಣ ಮಾನದಂಡಗಳ ಮಂಡಳಿ (ಬೈಟ್ಸ್) ನಡೆಸಿದ 15ನೇ ಆವೃತ್ತಿಯ ಟಿಸಿಎಸ್ ಟೆಕ್‌ಬೈಟ್ಸ್‌ನಲ್ಲಿ ಸ್ಪರ್ಧೆಯಲ್ಲಿ ಸುರತ್ಕಲ್ ಎನ್‌ಐಟಿಕೆ ವಿದ್ಯಾರ್ಥಿ ಕೌಶಿಕ್ ಎಸ್.ನಂದನ್ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮ ಬಹುಮಾನವನ್ನು ಬೆಳಗಾವಿ ಕೆಎಲ್ಎಸ್ ಇಂಜಿನಿಯರಿಂಗ್ ಕಾಲೇಜಿನ ಧೀರಜ್ ಅಂಗಡಿ ಗಳಿಸಿದ್ದಾರೆ. ಪ್ರಥಮ ಬಹುಮಾನ ಮತ್ತು ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿಗಳು ಕ್ರಮವಾಗಿ 85,000 ರೂ. ಮತ್ತು 50,000 ರೂ. ವಿದ್ಯಾರ್ಥಿ ವೇತನ ಪಡೆದರು.
ಟಿಒಸಿಎಸ್ ಬೆಂಗಳೂರಿನ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ, ಏರೋಸ್ಪೇಸ್ ಇಂಜಿನಿಯರಿಂಗ್‌ನ ಸುರೇಶ್ ಸುಂದರಂ, ಬೈಟ್ಸ್ ಸಹ ಅಧ್ಯಕ್ಷ ಡಾ.ಸೆಲ್ವನ್ ಡಿ ಮತ್ತು ಎಸ್‌ಜೆಬಿಐಟಿ ಪ್ರಾಂಶುಪಾಲ ಡಾ.ಕೆ.ವಿ ಮಹೇಂದ್ರ ಪ್ರಶಾಂತ್ ಪ್ರಶಸ್ತಿ ಪ್ರದಾನ ಮಾಡಿದರು.