ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ 1.29 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 26 ಗೇಟ್ ಮೂಲಕ ಅಂದಾಜು 1.30 ಲಕ್ಷ ಕ್ಯೂಸೆಕ್ ಹೆಚ್ಚವರಿ ನೀರು ನದಿಗೆ ಹರಿಸಲಾಗಿದೆ.
ಜಲನಯನ ಪ್ರದೇಶದಲ್ಲಿ ಭಾರಿ ಮಳೆಯಿಂದ ಜಲಾಶಯಕ್ಕೆ ಭಾರಿ ಪ್ರಮಾಣದ ಒಳಹರಿವು ಹರಿದು ಬರುತ್ತಿದೆ. ಗುರುವಾರ ತುಂಗಭದ್ರಾ ಜಲಾಶಯಕ್ಕೆ ಬೆಳಗ್ಗೆ 8ರ ಪ್ರಕಾರ 1.29 ಲಕ್ಷ ಕ್ಯೂಸೆಕ್‌ಗೂ ಅಧಿಕ ಒಳಹರಿವಿದೆ. ಜಲಾಶಯದ 26 ಗೇಟ್‌ಗಳನ್ನು 2.5ರಿಂದ 5 ಅಡಿ ವರೆಗೆ ಎತ್ತರಿಸಿ ನದಿಗೆ 1.30 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. 105.788 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 74.615 ಟಿಎಂಸಿ ನೀರು ಸಂಗ್ರಹವಿದೆ. 1633 ಅಡಿ ಎತ್ತರದ ಜಲಾಶಯದಲ್ಲಿ 1624.42 ಅಡಿ ನೀರಿದೆ. ಇನ್ನೂ ಜಲಾಶಯಕ್ಕೆ ಒಳ ಹರಿವು ಪ್ರಮಾಣ ಹೆಚ್ಚಾದಂತೆ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತದೆ.
ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಿ, ಹಂಪಿಯ ವಿಧಿವಿಧಾನ ಮಂಟಪ, ಪುರಂದರ ದಾಸರ ಮಂಟಪ, ಕೊಪ್ಪಳ, ಬಳ್ಳಾರಿ ವ್ಯಾಪ್ತಿಯಲ್ಲಿ ಕೂಡ ಹಲವು ಸ್ಮಾರಕ, ಮಂಟಪಗಳು ಮುಳುಗಡೆಯಾಗಿವೆ.