ತುಂಗಭದ್ರಾ ಜಲಾಶಯದ 28 ಕ್ರಸ್ಟ್ ಗೇಟ್ಗಳ ಮೂಲಕ ಹೆಚ್ಚುವರಿ ನೀರು ನದಿಗೆ ಹರಿಸಲಾಗಿದೆ. 
ಜಿಲ್ಲೆ

ತುಂಗಭದ್ರಾ ಜಲಾಶಯಕ್ಕೆ ತನಿಖಾ ತಂಡ ಭೇಟಿ

ಮಂಜುನಾಥ

ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಪ್ರಕರಣ ತನಿಖೆಗೆ ದಿಲ್ಲಿಯ ಪರಿಣತ ತಜ್ಞ ಎ.ಕೆ.ಬಜಾಜ್ ನೇತೃತ್ವದಲ್ಲಿ ತಾಂತ್ರಿಕ ಪರಿಶೀಲನಾ ಸಮಿತಿ ಸೋಮವಾರ ಭೇಟಿ ನೀಡಿದೆ ಪರಿಶೀಲಿಸಿದೆ.

ಟಿಬಿಬಿ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ಕಳೆದ ಆ.31ರಂದು ತಂಡಾ ರಜನೆ ಮಾಹಿತಿ ನೀಡಿದರು. ದಿಲ್ಲಿಯ ತಜ್ಞ ಹರ್ಕೇಶ್ ಕುಮಾರ, ಆಂಧ್ರಪ್ರದೇಶದ ತಾರಾಪುರಂ ಸುಧಾಕರ್ ಮತ್ತು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ತಲಾ ಒಬ್ಬರು ಪ್ರತಿನಿಧಿಗಳು ಈ ಸತ್ಯಶೋಧನಾ ಸಮಿತಿಯಲ್ಲಿದ್ದಾರೆ. ಭಾನುವಾರ ರಾತ್ರಿ ಟಿಬಿಡ್ಯಾಂನ ವೈಕುಂಟದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸೋಮವಾರದಿಂದ ತನಿಖೆ ನಡೆಸಿದ್ದಾರೆ.

ಜಲಾಶಯದ 33 ಕ್ರಸ್ಟ್ ಗೇಟ್‌ಗಳ ನಿರ್ವಹಣೆ ಸೇರಿದಂತೆ ಘಟನೆಯ ಸಂಪೂರ್ಣ ಮಾಹಿತಿ ಪಡೆಯಯಲಿದ್ದಾರೆ. ಮಂಗಳವಾರ ಕೂಡ ತನಿಖೆ ನಡೆಯಲಿದೆ. 15 ದಿನಗಳಲ್ಲಿ ವರದಿ ಒಪ್ಪಿಸಲು ಟಿಬಿಬಿ ಸೂಚಿಸಿದೆ. ತನಿಖಾ ತಂಡ ಗೇಟ್‌ಗಳ ಸ್ಥಿತಿಗತಿ, ಅವುಗಳ ಗುಣಮಟ್ಟದ ಕುರಿತು ಪರಿಶೀಲಿಸಿ ಆಷ್ಟು ಬೇಗ ವರದಿ ನೀಡಲಿದೆ.