ಕೊಪ್ಪಳ: ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ನದಿಗೆ ಅಪಾರ ನೀರು ಹರಿಬಿಡಲಾಗಿದೆ. ಜಿಲ್ಲಾಡಳಿತವೂ ಮುನ್ನೆಚ್ಚರಿಕೆ ನೀಡಿದೆ. ಆದರೆ, ಜಲಾಶಯ ಹಾಗೂ ನದಿ ಪಾತ್ರದಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರೆದಿದ್ದು, ಯಾವುದೇ ಸುರಕ್ಷತೆ ಕೈಗೊಳ್ಳದ ಕಾರಣ ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದೆ. 1.40 ಲಕ್ಷ ಕ್ಯೂಸೆಕ್ ಒಳಗಹರಿವಿದ್ದರೆ, ನದಿಗೆ 1.56 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. 33 ಗೇಟ್ಗಳ ಮೂಲಕ ನೀರು ಬಿಟ್ಟಿದ್ದು, ನದಿಪಾತ್ರ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ನದಿಪಾತ್ರದ ಗ್ರಾಮಗಳಲ್ಲಿ ಮುಂಜಾಗ್ರತೆ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಆಯಾ ಗ್ರಾಪಂಗಳ ಮೂಲಕ ಡಂಗೂರ ಸಾರುವ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಜಲಾಶಯದ ಮುಂಭಾಗದ ಮುನಿರಾಬಾದ್ ಹಳೇ ಸೇತುವೆ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಜನರ ರ್ನಿಬಂಧಕ್ಕೆ ಬ್ಯಾರಿಕೇಡ್ ಅಳವಡಿಸಿದ್ದರೂ ಜನರು ಲೆಕ್ಕಿಸಿದೇ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ೋಟೋ ತೆಗೆಯಲು ಮುಂದಾಗುತ್ತಿದ್ದಾರೆ.
ನದಿಪಾತ್ರದಲ್ಲಿ ಕಟ್ಟೆಚ್ಚರ ಕೈಗೊಂಡಿರುವ ಅಧಿಕಾರಿಗಳು, ಪೊಲೀಸರು ಜಲಾಶಯದಲ್ಲಿ ಯಾವುದೇ ಸುರಾ ಕ್ರಮ ಕೈಗೊಂಡಿಲ್ಲ. ಮುನಿರಾಬಾದ್ ಕಾಡಾ ಕಚೇರಿ ಮುಂಭಾಗದಿಂದ ಜಲಾಶಯದ ಮೇಲ್ಭಾಗಕ್ಕೆ ತೆರಳು ಪ್ರವೇಶವಿದೆ. ಮೇಲೆ ನಿಂತು ವೀಸುವ ಜತೆಗೆ ಜನರು ನೀರಿಗಿಳಿವ ಸಾಹಸ ಮಾಡುತ್ತಿದ್ದಾರೆ. ಬಂಡೆಗಳ ಮೇಲೆ ನಿಂತು ೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋದ ಕೆಲವರು ಜಲಾಶಯದಲ್ಲಿ ಈಜಾಡುವ ಮೂಲಕ ಹುಚ್ಚಾಟ ಮೆರೆಯುತ್ತಿದ್ದಾರೆ. ಇವರಿಗೆ ಯಾವುದೇ ರ್ನಿಬಂಧ ಇಲ್ಲದಂತಾಗಿದೆ. ಯುವಕರು ಆಳದಚವರೆಗೂ ಈಜಾಡುತ್ತಿದ್ದಾರೆ.
ಜಲಾಶಯದ ಒಳ ಹರಿವು ಗಂಟೆಗೊಮ್ಮೆ ಏರಿಕೆಯಾಗುತ್ತಿದೆ. ಗಾಳಿಯೊಂದಿಗೆ ಜೋರಾದ ಅಲೆಗಳು ಬೀಸುತ್ತಿವೆ. ಸುಳಿಗಳು ನಿರ್ಮಾಣವಾಗುತ್ತಿದ್ದು ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಿದ್ದರೂ ಜನರು ನೀರಿಗಿಳಿಯುತ್ತಿದ್ದಾರೆ. ಮತ್ತೊಂದೆಡೆ ಹೊರ ಹರಿವು ಹೆಚ್ಚುತ್ತಿದ್ದು, ನದಿಗೆ ನೀರಿನ ಹರಿವೂ ಏರಿಕೆಯಾಗುತ್ತಿದೆ. ಕ್ರಸ್ಟ್ ಗೇಟ್ ಮುಂಭಾಗದಲ್ಲೇ ನಿಂತು ಕೆಲವರು ೋಟೋ, ವಿಡಿಯೋ ತೆಗೆಯುವುದು, ರೀಲ್ಸ್ ಮಾಡುತ್ತಿದ್ದಾರೆ. ನೀರಿನ ಹರಿವಿಗೆ ಸಿಕ್ಕಿಕೊಂಡರೆ ಅಪಾಯವಿದೆ ಎಂಬ ಅರಿವಿದ್ದರೂ ಹುಚ್ಚು ಸಾಹಸ ಮಾಡುತ್ತಿದ್ದಾರೆ.
ಪ್ರವಾಸಿಗರ ದಂಡು
ಜಲಾಶಯ ಭರ್ತಿಯಾಗಿದ್ದು, ಕಾಲುವೆಗೆ ನೀರು ಬಿಟ್ಟಿದ್ದು ರೈತರಿಗೆ ಹರ್ಷ ತಂದಿದೆ. ಮತ್ತೊಂದೆಡೆ ಪ್ರವಾಸಿಗರು ಜಲಾಶಯದತ್ತ ಆಗಮಿಸುತ್ತಿದ್ದಾರೆ. ಭಾನುವಾರ ರಜಾ ದಿನವಾದ ಕಾರಣ ಅಪಾರ ಸಂಖ್ಯೆಯಲ್ಲಿ ಜನರು ಕಂಡುಬಂದರು. ಮಹಿಳೆ, ಮಕ್ಕಳ ಹಾದಿಯಾಗಿ ಎಲ್ಲರೂ ತುಂಗಭದ್ರೆ ಮನಮೋಹಕ ದೃಶ್ಯ ಕಂಡು ಸಂಭ್ರಮಿಸಿದರು. ಕ್ರಸ್ಟ್ ಗೇಟ್ಗಳಿಗೆ ಬಣ್ಣ ಬಣ್ಣದ ದೀಪಾಲಂಕಾರ ಮಾಡಿದ್ದು ನೋಡುಗರನ್ನು ಆಕರ್ಷಿಸುತ್ತಿದೆ.
ಬೇಕಿದೆ ಕಟ್ಟೆಚ್ಚರ
ತುಂಗಭದ್ರಾ ಜಲಾಶಯದ ಹಿನ್ನೀರು ಹಾಗೂ ನದಿ ಪಾತ್ರದಲ್ಲೂ ಪ್ರವಾಹ ಸ್ಥಿತಿ ಉಂಟಾಗಿದೆ. ಹೀಗಿದ್ದರೂ ಯುವಕರು, ಮಕ್ಕಳು ನದಿಯಲ್ಲಿ ಈಜಾಡುವುದು ನಡೆದಿದೆ. ಅಪಾಯ ಲೆಕ್ಕಿಸದೆ ಚಿಣ್ಣರು ದಡದಿಂದ ನದಿಗೆ ಜಿಗಿಯುತ್ತಿದ್ದಾರೆ. ಜಿಲ್ಲಾಡಳಿತ ಡಂಗೂರ ಸಾರಿಸಿ ಸುಮ್ಮನಾಗಿದೆ. ಆದರೆ, ಅಪಾಯ ಎನಿಸುವ ಸ್ಥಗಳಲ್ಲಿ ಅಧಿಕಾರಿಗಳು, ಪೊಲೀಸರನ್ನು ನಿಯೋಜಿಸಿಲ್ಲ. ಜನರಿಗೆ ನಿರ್ಬಂಧ ಇಲ್ಲದಂತಾಗಿದ್ದು ಮುಂದಾಗುವ ಅನಾಹುತ ಲೆಕ್ಕಿಸದೇ ನೀರಿಗೆ ಇಳಿಯುತ್ತಿದ್ದಾರೆ. ಅಪಾಯ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಕೆ, ಸಿಬ್ಬಂದಿ ನಿಯೋಜಿಸಿ ಜನರನ್ನು ನಿಯಂತ್ರಿಸುವ ಕೆಲಸವಾಗಬೇಕಿದೆ.