ಜಿಲ್ಲೆ

ಟಿಬಿ ಡ್ಯಾಂ ಭರ್ತಿಗೆ ಕೇವಲ ಆರು ಅಡಿ ಬಾಕಿ; ಒಳಹರಿವು ಪ್ರಮಾಣದಲ್ಲಿ ಇಳಿಕೆ

Ballari

ಬಳ್ಳಾರಿ: ತುಂಗಭದ್ರಾ ಅಣೆಕಟ್ಟೆಗೆ ಕಳೆದ ಆರು ದಿನಗಳಲ್ಲಿ 50 ಟಿಎಂಸಿ ಅಡಿ ನೀರು ಹರಿದುಬಂದಿದೆ. ಜಲಾಶಯ ಭರ್ತಿಗೆ ಇನ್ನೂ ಕೇವಲ ಆರು ಅಡಿ ಬಾಕಿ ಇದೆ. ತುಂಗಭದ್ರಾ ಅಣೆಕಟ್ಟೆ 1633 ಅಡಿ ಎತ್ತರ ಹಾಗೂ 100.855 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಮಂಗಳವಾರ ಅಣೆಕಟ್ಟೆಯಲ್ಲಿ 1627.23 ಅಡಿವರೆಗೆ ಭರ್ತಿಯಾಗಿದ್ದು, 80.172 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಸೋಮವಾರ 1.16 ಲಕ್ಷ ಕ್ಯೂಸೆಕ್ ಇದ್ದ ಒಳಹರಿವು ಮಂಗಳವಾರ 98916 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ತುಂಗಾ ಜಲಾಶಯದಿಂದ ಹೊರಹರಿವು 24,660ಕ್ಕೆ ಕುಸಿತವಾಗಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ತಗ್ಗಿದೆ.