ಜಿಲ್ಲೆ

ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರ ಬೇಡಿಕೆ ಶೀಘ್ರ ಪರಿಹಾರ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಭರವಸೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ ವರ್ಗಗಳ ಬೇಡಿಕೆ ಮತ್ತು ಸೂಕ್ತವಾದ ಮೂಲಭೂತ ಸೌಕರ್ಯವನ್ನು ಒದಗಿಸಲು ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆಸಿಕೊಂಡು ಮಾತುಕತೆ ನಡೆಸಿ ಜಿಲ್ಲೆಯ ಕೂಡಲೇ ಕಾರ್ಯಪ್ರವೃತ್ತರಾಗುತ್ತೇವೆ. ಎಲ್ಲಾ ಶಾಸಕರು ಸಹಕಾರ ನೀಡಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಭರವಸೆ ನೀಡಿದ್ದಾರೆ.


ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭಾನುವಾರ ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಇದರ 50ನೇ ವರ್ಷದ ಸ್ವರ್ಣ ಸಂಭ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿಸೋಜ, ಮೋನಪ್ಪ ಭಂಡಾರಿ, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅವರು ಕಾರ್ಯಕ್ರಮ ಉದ್ಘಾಟಿಸಿದರು.


ಶಾಸಕ ವೇದವ್ಯಾಸ ಕಾಮತ್,ಮೇಯರ್ ಜಯಾನಂದ ಅಂಚನ್, ಉಡುಪಿ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ನ ಪ್ರಧಾನ ಕಾರ‌್ಯದರ್ಶಿ ರಮೇಶ್ ಕೋಟ್ಯಾನ್ ಮೊದಲಾದವರಿದ್ದರು.


ಸಮಾರೋಪ ಸಮಾರಂಭದಲ್ಲಿ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಅತಿಥಿಯಾಗಿದ್ದರು. ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ಸಂಚಾರಿ ವೃತ್ತನಿರೀಕ್ಷಕ ಗೋಪಾಲಕೃಷ್ಣ ಭಟ್, ವಿಮಾನ ನಿಲ್ದಾಣ ಚಾಲಕರ ಸಂಘದ ಅಧ್ಯಕ್ಷ ಜಯಂತ್ ಸುವರ್ಣ, ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಭಾರತ್ ಮೋಟಾರ್ಸ್‌ ಪ್ರೈವೇಟ್ ಸಂಸ್ಥೆಯ ಮುಖ್ಯಸ್ಥ ಡೇನಿಸ್ ಗೋನ್ಸಾಲ್‌ವೆಸ್, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಭಟ್, ಸಂಘದ ಅಧ್ಯಕ್ಷರಾದ ಆನಂದ ಕೆ., ಕಾರ್ಯಾಧ್ಯಕ್ಷ ಪ್ರಮೋದ್ ಉಳ್ಳಾಲ ಉಪಸ್ಥಿತರಿದ್ದರು.


ಸೀಸನ್ (1), ಸೀಸನ್ (2) ಕ್ರಿಕೆಟ್ ಟೂರ್ನಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಸ್ವರ್ಣ ಸಂಭ್ರಮದ ಅದೃಷ್ಟ ಚೀಟಿಯಲ್ಲಿ ವಿಜೇತರಾದವರಿಗೆ ಚಿನ್ನದ ನಾಣ್ಯಗಳನ್ನು ಪ್ರದಾನ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂತೋಷ್ ಕೊಲ್ಯ ನಡೆಸಿಕೊಟ್ಟರು.


ಸಭಾಧ್ಯಕ್ಷ ದಿನೇಶ್ ಕುಂಪಲ ಪ್ರಸ್ತಾವನೆಗೈದರು. ಸಂಘದ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಎಂ. ಸ್ವಾಗತಿಸಿ,ಉದಯ ಕುಮಾರ್ ವಂದಿಸಿದರು. ಸಂಘದ ಪದಾಧಿಕಾರಿಗಳಾದ ನಾಗಪ್ಪ ಅಡ್ಯಾರು, ಅಬೆಲ್ ಡಿಸೋಜ, ಹರೀಶ್ ಶೆಟ್ಟಿ ಕುತ್ತಾರು, ಶುಭಕರ ಶೆಟ್ಟಿ, ಲೋಕೇಶ್ ಕಶೆಕೋಡಿ, ಸಂಜಯ್ ಕೋಟ್ಯಾನ್, ಸುರೇಶ್ ಸಾಲಿಯಾನ್, ಅಬ್ದುಲ್ ಲತೀಫ್, ಹರಿಶ್ಚಂದ್ರ, ಮೋಹನ್‌ದಾಸ್ ಸುರತ್ಕಲ್, ಕರುಣಾಕರ ಕೆ., ಸಂದೀಪ್ ಸಾಲಿಯಾನ್, ದೇವರಾಜ್ ಡಿ. ಬಾಳ ಉಪಸ್ಥಿತರಿದ್ದರು.