ಬೆಂಗಳೂರು: ಕರ್ನಾಟಕ ಟ್ಯಾಕ್ಸ್ ಆನ್ ಪ್ರೊಫೆಷನ್ಸ್, ಟ್ರೇಡ್ಸ್, ಕಾಲಿಂಗ್ಸ್ ಅಂಡ್ ಎಂಪ್ಲಾಯ್ಮೆಂಟ್ ಆಕ್ಟ್ ಅಡಿ ನೋಂದಾಯಿಸಲ್ಪಟ್ಟ ಪ್ರತಿಯೊಬ್ಬ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಪಾವತಿಸಿದ ಸಂಬಳ ಮತ್ತು ಅದರಲ್ಲಿ ಅವನಿಗೆ ಕಡಿತಗೊಳಿಸಿದ ತೆರಿಗೆಯ ಹೇಳಿಕೆಗಳನ್ನು ಸಲ್ಲಿಸಲು ಮೇ 20 ಕೊನೆಯ ದಿನವಾಗಿದೆ.
ಈ ಮೊದಲು ಸೂಚಿಸಿದಂತೆ ಮಾರ್ಚ್ 30ರ ಒಳಗೆ ಸಲ್ಲಿಸಬೇಕಾಗಿತ್ತು. ಈಗ ಹೇಳಿಕೆ ಸಲ್ಲಿಸುವ ಅವಧಿ ವಿಸ್ತರಿಸುವುದರ ಜತೆಗೆ ಕಟಾವುಗೊಳಿಸಿದ ತೆರಿಗೆಯನ್ನು ಸಂದಾಯ ಮಾಡಲು ಮೇ 30 ಕೊನೆಯ ದಿನವಾಗಿ ನಿಗದಿಪಡಿಸಿ ವಿಶೇಷ ರಾಜ್ಯಪತ್ರ ಹೊರಡಿಸಲಾಗಿದೆ.