ತಾವರಗೇರಾದಲ್ಲಿ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಚಾಲನೆ ನೀಡಿದರು. ಪಪಂ ಸದಸ್ಯ ಬಸನಗೌಡ ಓಲಿ, ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಪಪಂ ಮಾಜಿ ಅಧ್ಯಕ್ಷ ವಿಕ್ರಮ ರಾಯ್ಕರ, ಗ್ರಾಪಂ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲತವಾಡ ಇತರರಿದ್ದರು.  
ಜಿಲ್ಲೆ

ಶಿಕ್ಷಣದೊಂದಿಗೆ ಕ್ರೀಡೆಯೂ ಮುಖ್ಯ

ತಾವರಗೇರಾ: ಗ್ರಾಮೀಣ ಯುವಕರಿಗೆ ಶಿಕ್ಷಣದ ಜತೆಗೆ ಕ್ರೀಡೆಯೂ ಮುಖ್ಯವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಪಟ್ಟಣದ ಶಶಿಧರ ಸ್ವಾಮಿ ವಿದ್ಯಾನಿಕೇತನ ಕಾಲೇಜಿನಲ್ಲಿ ಜಿಲ್ಲಾ ಖೋಖೋ ಅಸೋಸಿಯೇಷನ್, ಗವಿಶ್ರೀ ಸ್ಫೋರ್ಟ್ಸ್ ಕ್ಲಬ್ ಹಾಗೂ ವಿನಾಯಕ ಗೆಳೆಯರ ಬಳಗದ ಸಹಯೋಗದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪುರುಷರ ಖೋ-ಖೋ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿಯಾಗಿದ್ದು, ಇಂಥ ಗ್ರಾಮೀಣ ಕ್ರೀಡಾಕೂಟಗಳು ಯುವಕರ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಲಿವೆ ಎಂದರು.

ಯುವ ಮುಖಂಡ ದೊಡ್ಡಬಸನಗೌಡ ಬಯ್ಯಪುರ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ಪಾಲ್ಗೊಂಡಾಗ ಆರೋಗ್ಯದ ಜತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು.

ದಾವಣಗೆರೆ-ಹಾಸನ ತಂಡಗಳಿಂದ ಆಟ ಆರಂಭಗೊಂಡಿತು. ಮೂರು ದಿನಗಳವರೆಗೆ ಪಂದ್ಯಾವಳಿ ನಡೆಯಲಿದ್ದು, ಒಟ್ಟು 29 ತಂಡಗಳು ಪಾಲ್ಗೊಂಡಿವೆ. ಬಾಬಾಸಾಹೇಬ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು. ಶ್ರೀ ರವಿಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪಪಂ ಸದಸ್ಯ ಬಸನಗೌಡ ಓಲಿ, ಉಪ ತಹಸೀಲ್ದಾರ್ ರೇಣುಕಮ್ಮ ಹಾದಿಮನಿ, ಪಿಎಸೈ ನಾಗರಾಜ ಕೊಟಗಿ, ಪ್ರಾಚಾರ್ಯ ಲಕ್ಷ್ಮಣಸಿಂಗ್ ವಗರನಾಳ, ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಪಪಂ ಮಾಜಿ ಅಧ್ಯಕ್ಷ ವಿಕ್ರಮ ರಾಯ್ಕರ, ಗ್ರಾಪಂ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲತವಾಡ, ಮಾಜಿ ಸದಸ್ಯ ಸಾಗರ ಬೇರಿ, ಪ್ರಮುಖರಾದ ಮಂಜುನಾಥ ಜೂಲಕುಂಟಿ, ವೀರನಗೌಡ ಉದ್ದಂಡಗೌಡರ, ಪ್ರಕಾಶಗೌಡ ಬೆದವಟ್ಟಿ, ಚಂದ್ರಶೇಖರ ನಾಲತವಾಡ, ಚನ್ನಪ್ಪ ನಾಲತವಾಡ, ಅರುಣಕುಮಾರ, ವಕೀಲ ಬಸವರಾಜ ನಾರಿನಾಳ, ಪ್ರಭಾಕರ ಅವರಡ್ಡಿ, ಪಂಪಾಪತಿ ಸಾಸ್ವಿಹಾಳ, ಸಂಸ್ಥೆಯ ಸಂಜೀವ ಛಲವಾದಿ, ಕೊಟ್ರೇಶ ಮಕಾರಿ, ಹನುಮೇಶ ಮದ್ದೀನ ಇತರರಿದ್ದರು.