ಜಿಲ್ಲೆ

ಕೆಸರುಮಯ ರಸ್ತೆಯಲ್ಲಿ ಸಿಲುಕಿಕೊಂಡ ಗರ್ಭಿಣಿ ಕರೆದೊಯ್ಯಲು ಬರುತ್ತಿದ್ದ ಆಂಬುಲೆನ್ಸ್ !

ತಾವರಗೇರಾ: ಸಮೀಪದ ಹುಲಿಯಾಪುರ ಗ್ರಾಮದಿಂದ ಮುಕ್ತ ರಾಂಪುರ ಮಾರ್ಗದಲ್ಲಿ ಕೆಸರುಮಯವಾದ ರಸ್ತೆಯಲ್ಲಿ 108 ಆಂಬುಲೆನ್ಸ್ ಮಂಗಳವಾರ ಸಿಲುಕಿಕೊಂಡು ಹೊರಬರಲು ಒದ್ದಾಡಿತು.

ಮುಕ್ತ ರಾಂಪುರ ಗ್ರಾಮದ ಗರ್ಭಿಣಿ ಶರಣಮ್ಮ ಕಲ್ಲಬಾವಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಇವರನ್ನು ಹಿರೇಮನ್ನಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರುಲು ಹೋಗುವಾಗ ರಸ್ತೆಯ ಮಧ್ಯದ ಕೆಸರಿನಲ್ಲಿ ಆಂಬುಲೆನ್ಸ್ ಸಿಲುಕಿಕೊಂಡಿತು. ನಂತರ ಸ್ಥಳೀಯರು ಆಂಬುಲೆನ್ಸ್ ನೆರವಿನೊಂದಿಗೆ ಹೊರ ಬಂದಿತು.

ಈ ರಸ್ತೆಯಲ್ಲಿ ಡಾಂಬರೀಕರಣ ಸಲುವಾಗಿ ಮರಂ ಹಾಕಿದ್ದು, ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ಕೆಸರುಮಯವಾಗಿದೆ. ಈ ರಸ್ತೆಗೆ ಆದಷ್ಟು ಬೇಗನೆ ಡಾಂಬರೀಕರಣ ಮಾಡುವಂತೆ ಅಮರೇಶ ನಾಯಕ ಹಡಗಲಿ, ಶಿವಮೂರ್ತಿಗೌಡ ಗೌಡ್ರು, ಅಮರೇಶ ಊಜಿ ಸೇರಿ ಇತರರು ಒತ್ತಾಯಿಸಿದ್ದಾರೆ.