ತಾವರಗೇರಾದಲ್ಲಿ ವಾಸವಿ ಅಮ್ಮನವರಿಗೆ ಪೂಜೆ ನೆರವೇರಿಸಲು ಗಂಗಾ ಸ್ಥಳಕ್ಕೆ ಹೊರಟಿರುವ ಆರ್ಯವೈಶ್ಯ ಸಮುದಾಯದ ಮಹಿಳೆಯರು.  
ಜಿಲ್ಲೆ

ಕುಂಭ-ಕಳಸದೊಂದಿಗೆ ಭಾವಚಿತ್ರ ಮೆರವಣಿಗೆ

ತಾವರಗೇರಾ: ಪಟ್ಟಣದ ಆರ್ಯವೈಶ್ಯ ಸಮುದಾಯದವರು ಕುಲ ದೇವತೆ ಕನ್ಯಕಾ ಪರಮೇಶ್ವರಿ (ವಾಸವಿ) ಜಯಂತಿಯನ್ನು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬುಧವಾರ ಆಚರಿಸಿದರು.

ಪ್ರಮುಖ ರಸ್ತೆಗಳಲ್ಲಿ ಕುಂಭ-ಕಳಶದೊಂದಿಗೆ ವಾಸವಿ ಅಮ್ಮನವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಕುಂಕುಮಾರ್ಚನೆ, ತೊಟ್ಟಿಲ ಸೇವೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಸಮಾಜದ ಅಧ್ಯಕ್ಷ ಹನುಮೇಶಪ್ಪ ಕ್ಯಾಡೇದ, ಯುವ ಅಧ್ಯಕ್ಷ ಮಂಜುನಾಥ ಕಂದಗಲ್ಲ, ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ದರೋಜಿ, ಹಿರಿಯರಾದ ಹುಚ್ಚಪ್ಪ, ಶಂಕರ ಇಲ್ಲೂರ, ನರಹರಿಯಪ್ಪ ದರೋಜಿ, ಪ್ರಾಣೇಶ, ಶ್ರೀನಿವಾಸ ದರೋಜಿ,ನಾಗರಾಜ ತೆಮ್ಮಿನಾಳ, ಗೋಪಾಲಕೃಷ್ಣ ದರೋಜಿ, ರಮಾ ಇಲ್ಲೂರ, ವಾಸವಿ ತೆಮ್ಮಿನಾಳ, ಜ್ಯೋತಿ ಶಿಡ್ಲಭಾವಿ ಇತರರಿದ್ದರು.