ತಾವರಗೇರಾದ ರಾಯನಕೆರೆ ಮಳೆಗೆ ತುಂಬಿ ಕಡಿಕೋಡಿ ಬಿದ್ದಿದೆ. 
ಜಿಲ್ಲೆ

ಮೂರು ದಿನಗಳಿಂದ ಸುರಿದ ಅಧಿಕ ಮಳೆ ರಾಯನ ಕೆರೆಗೆ ಬಿತ್ತು ಕಡಿಕೋಡಿ

ತಾವರಗೇರಾ: ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ರಾಯನ ಕೆರೆ ತುಂಬಿ ಕಡಿಕೋಡಿ ಬಿದ್ದಿದೆ. ನೀರಿನ ಹರಿವಿನ ಸಹಜ ಸೌಂದರ್ಯ ನೋಡಲು ಜನ ಕೆರೆಯತ್ತ ಧಾವಿಸುತ್ತಿದ್ದಾರೆ.

ಭಾನುವಾರ ರಾತ್ರಿಯಿಂದ ಆರಂಭಗೊಂಡದರೆ ಗಂಟೆಗಟ್ಟಲೆ ಬಿಡದೆ ಸುರಿಯುವ ಮಳೆಯಿಂದ ಕೆರೆಕಟ್ಟೆಗಳು, ಹಳ್ಳಗಳು ತುಂಬಿ ಹರಿಯುತ್ತ್ತಿವೆ. ಅಲ್ಲದೇ, ಸೋಮವಾರ ರಾತ್ರಿ ಹತ್ತಕ್ಕೆ ಆರಂಭವಾದ ಮಳೆ ಮಂಗಳವಾರ ಬೆಳಗಿನ ಜಾವದವರೆಗೆ ಸುರಿದಿದ್ದು, 30 ಎಂ.ಎಂ.ಮಳೆ ಪ್ರಮಾಣ ದಾಖಲಾಗಿದೆ. ಅತೀಯಾದ ಮಳೆಗೆ ರೈತರ ಅನೇಕ ಬೆಳೆಗಳು ಹಾಳಾಗುತ್ತಿವೆ. ಸದ್ಯ ಸೂರ್ಯಕಾಂತಿ ಬೆಳೆ ಕಟಾವ್ ಮಾಡಿದ್ದು, ಮಳೆಯಿಂದ ರಾಶಿ ಮಾಡಲು ಅವಕಾಶ ಸಿಗದೆ ರೈತರ ಗೊಣಗಾಡುತ್ತಿದ್ದಾರೆ. ತೊಗರಿ ಬೆಳೆಗೆ ಕೀಟಗಳ ಕಾಟ ಹೆಚ್ಚಿದ್ದು, ಕ್ರಿಮಿನಾಶಕ ಸಿಂಪಡಿಸಲೂ ಮಳೆ ಬಿಡುವು ನೀಡುತ್ತಿಲ್ಲ. ಇದರಿಂದ ರೈತ ಸಮೂಹ ಚಿಂತೆಗೀಡಾಗಿದೆ.