ತಾವರಗೇರಾದ ಕಲ್ಯಾಣ ಮಂಟಪವೊಂದರಲ್ಲಿ ಹಮ್ಮಿಕೊಂಡಿದ್ದ ರಂಗ ತರಬೇತಿ ಮುಕ್ತಾಯ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಪ್ರಮುಖರಾದ ಚಾಂದ್‌ಬಾಷಾ, ಡಾ.ಎಸ್. ಪೋರೆ, ರೇವತಿ, ದಶರಥಸಿಂಗ್, ಶರಣು, ಲಕ್ಷ್ಮಣ ಪೀರಗಾರ ಇದ್ದರು.  
ಜಿಲ್ಲೆ

ರಂಗ ತರಬೇತಿ ಪಡೆದವರಿಗೆ ಅವಕಾಶ ಹಲವು, ನಾಟಕ ಅಕಾಡೆಮಿ ಸದಸ್ಯ ಚಾಂದ್‌ಬಾಷಾ ಕಿಲ್ಲೆದಾರ ಹೇಳಿಕೆ

ಕುರುವತ್ತಿ ಶ್ರೀಕಾಂತಪ್ಪ

ತಾವರಗೇರಾ: ರಂಗ ತರಬೇತಿ ಪಡೆದ ಕಲಾವಿದರು ಎಲ್ಲಾ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಪ್ರಯತ್ನ ಮಾಡಬೇಕು ಎಂದು ನಾಟಕ ಅಕಾಡೆಮಿ ಸದಸ್ಯ ಚಾಂದ್ ಬಾಷಾ ಕಿಲ್ಲೆದಾರ ಹೇಳಿದರು.

ಕಳೆದ ಒಂದು ತಿಂಗಳಿಂದ ಪಟ್ಟಣದ ಬುದ್ಧವಿಹಾರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕೊಪ್ಪಳದ ರಂಗಧಾರ ರೆಪರ್ಟರಿ ಸಹಯೋಗದಲ್ಲಿ ನಡೆದ ರಂಗ ತರಬೇತಿ ಉಚಿತ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ರಂಗ ತರಬೇತಿ ಹೊಂದಿರುವ ಕಲಾವಿದರು ಮುಂದೆ ರಂಗಭೂಮಿ ಕ್ಷೇತ್ರ, ಧಾರಾವಾಹಿ ಅಥವಾ ಚಲನಚಿತ್ರಗಳಲ್ಲಿ ನಟಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಲ್ಲ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಮುಂದಡಿ ಇಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಪಂ ಸದಸ್ಯ ದಶರಥಸಿಂಗ್, ಕೊಪ್ಪಳದ ವಿಸ್ತಾರ ರಂಗ ಶಾಲೆಯ ಸಂಯೋಜಕಿ ರೇವತಿ ಕುಂದನಾಡು, ಸ್ಥಳೀಯ ಸ.ಬಾ.ಪ.ಪೂ.ಕಾಲೇಜಿನ ಪ್ರಾಚಾರ್ಯ ಎಚ್.ಬಿ ಜಗ್ಗಲ್, ಎಸ್. ಎಸ್‌ವಿ ಕಾಲೇಜಿನ ಪ್ರಾಚಾರ್ಯ ಎಸ್. ಬಿ.ಹಿರೇಮಠ, ಎಸ್.ಎಂ.ವಿ.ಕಾಲೇಜಿನ ಪ್ರಾ.ಲಕ್ಷ್ಮಣಸಿಂಗ ವಗರನಾಳ, ಮ್ಯಾನೇಜರ್ ರಾಮಣ್ಣ ಭೇರಗಿ, ಸಮೂಹ ಸಂಸ್ಥೆಯ ಪ್ರೊಜೆಕ್ಟ್ ಆಫಿಸರ್ ಬಸನಗೌಡ ಪಾಟೀಲ, ಕೊಪ್ಪಳದ ರಂಗಧಾರ ರೆಪರ್ಟರಿ ಸಂಸ್ಥೆಯ ಶರಣು ಶೆಟ್ಟರ್, ಶಿಬಿರದ ನಿರ್ದೇಶಕ ನಿನಾಸಂ ಪದವೀಧರ ಪೀರಗಾರ ಲಕ್ಷ್ಮಣ ಪಾಲ್ಗೊಂಡಿದ್ದರು.

ಪ್ರಾಚಾರ್ಯ ಡಾ. ಸುಭಾಷ್ ಪೋರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣೇ ಗೌಡನ ಆನೆ ಹಾಗೂ ಬೋಳೆಶಂಕರ ಎಂಬ ಎರಡು ನಾಟಕಗಳನ್ನು ತರಬೇತಿ ಪಡೆದ ಕಲಾವಿದರು ಪ್ರದರ್ಶಿಸಿದರು. ಲಕ್ಷ್ಮಣ ಪೀರಗಾರ ಸ್ವಾಗತಿಸಿದರು. ಶರಣು ಶೆಟ್ಟರ್ ವಂದಿಸಿದರು.