ತಾವರಗೇರಾ ಸಮೀಪದ ಕಿಲ್ಲಾರಹಟ್ಟಿಯ ಹಳ್ಳ ತುಂಬಿ ಸೇತುವೆ ಮೇಲೆ ನೀರು ಹರಿಯುತ್ತಿರುವುದು. 
ಜಿಲ್ಲೆ

ಮಳೆಗೆ ಕಿಲ್ಲಾರಹಟ್ಟಿ ಹಳ್ಳ ಭರ್ತಿ

ಶ್ರೀನಾಥ

ತಾವರಗೇರಾ: ಪಟ್ಟಣದ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಸಮೀಪದ ಕಿಲ್ಲಾರಹಟ್ಟಿಯ ಹಳ್ಳ ಭರ್ತಿಯಾಗಿದೆ. ಹಳ್ಳದ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದರಿಂದ ಶುಕ್ರವಾರ ಬೆಳಗ್ಗೆ ಸಂಚಾರ ಸ್ಥಗಿತಗೊಂಡಿತ್ತು.

ಇನ್ನು ಮ್ಯಾಗಳಡೊಕ್ಕಿ ಗ್ರಾಮದಲ್ಲಿ ಕೆಂಚಮ್ಮ ದೋಟಿಹಾಳ, ದ್ಯಾವಮ್ಮ ಹಿರೇಬೇರಗಿ, ರೂಪಾಸಿಂಗ್ ಹಿರೇಶಾಮಣ್ಣ, ಕರಡೆಪ್ಪ ಗುರಿಕಾರ ಎನ್ನುವವರ ನಾಲ್ಕು ಮನೆಗಳು ಕುಸಿದಿದ್ದು, ಮನೆಯಲ್ಲಿನ ಆಹಾರ ಧಾನ್ಯಗಳು ಹಾಳಾಗಿವೆ.

ಗ್ರಾಮಕ್ಕೆ ಗ್ರಾಮಾಧಿಕಾರಿ ಮೈತ್ರಾ ಹುನಗುಂದ ಭೇಟಿನೀಡಿ ಪರಿಶೀಲಿಸಿದ್ದು, ಯಾವುದೇ ಜೀವಹಾನಿ ಆಗಿಲ್ಲ ಎಂದು ತಿಳಿಸಿದ್ದಾರೆ.