ತಾವರಗೇರಾ ಜಮೀನೊಂದರಲ್ಲಿ ಬಿತ್ತನೆಯಲ್ಲಿ ತೊಡಗಿದ ರೈತ.  
ಜಿಲ್ಲೆ

ತಾವರಗೇರಾದಲ್ಲಿ ಬಿತ್ತನೆ ಆರಂಭ

ಕುರುವತ್ತಿ ಶ್ರೀಕಾಂತಪ್ಪ

ತಾವರಗೇರಾ: ಕಳೆದ ಒಂದು ವಾರದಿಂದ ಸುರಿದ ಮಳೆ 2-3 ದಿನಗಳಿಂದ ನಿಂತಿದ್ದು ರೈತರು ಬಿತ್ತನೆ ಆರಂಭಿಸಿದ್ದಾರೆ. ಈಗಾಗಲೇ ಜಮೀನುಗಳಲ್ಲಿ ಹೆಸರು,

ಮೆಕ್ಕೆಜೋಳ, ನವಣೆ, ಸಜ್ಜೆ ಬಿತ್ತನೆ ಕಾರ್ಯ ಆರಂಭವಾಗಿದೆ.

ಆರ್‌ಎಸ್‌ಕೆ ಪ್ರಕಾರ 5 ಕ್ವಿಂಟಾಲ್ ಹೆಸರು, 3 ಕ್ವಿಂಟಾಲ್ ಮೆಕ್ಕೆ ಜೋಳ, 2 ಕ್ವಿಂಟಾಲ್ ನವಣೆ, 8 ಕ್ವಿಂಟಾಲ್ ಸಜ್ಜೆ ಮಾರಾಟವಾಗಿದೆ ಎಂದು ಕೃಷಿ ಅಧಿಕಾರಿ ಆಶಾ ರಾಠೋಡ್ ತಿಳಿಸಿದ್ದಾರೆ.

ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದೆ. ಮೇ 25ರಿಂದ ರೋಹಿಣಿ ಮಳೆ ಆರಂಭವಾಗಿದ್ದು, ಜೂ.8ರವರೆಗೆ ಇರಲಿದೆ. ಇದು ಬಿತ್ತಲು ಸೂಕ್ತ ಸಮಯವಾಗಿದೆ ಎಂದು ತಿಳಿಸಿದ್ದಾರೆ.