ಜಿಲ್ಲೆ

ಮೌನೇಶ್ವರ ರಥೋತ್ಸವ 12ಕ್ಕೆ

ಪ್ರವೀಣ ಉದುಸಾ ದಲಬಂಜನ್

ತಾವರಗೇರಾ: ಪಟ್ಟಣದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಲೇಬಗೇರಿಯ ಮಧಾನೆಗುಂದಿ ಸರಸ್ವತಿ ಪೀಠ ಸಂಸ್ಥಾನದ ಬ್ರಹ್ಮಯ್ಯ ಸ್ವಾಮಿ ಹಾಗೂ ದಿವಾಕರ ಸ್ವಾಮಿಗಳು ಧಾರ್ಮಿಕ ಧ್ವಜಾರೋಹಣ ನೆರವೇರಿಸುವ ಮೂಲಕ ಮೌನೇಶ್ವರ ಜಾತ್ರೆಗೆ ಚಾಲನೆ ನೀಡಿದರು.

ದೇವಸ್ಥಾನದಲ್ಲಿ ಫೆ.7 ರಿಂದ 12 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.9 ರಂದು ಬೆಳಗ್ಗೆ ಮೌನೇಶ್ವರ ಮೂರ್ತಿಗೆ ಅಭಿಷೇಕ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಉಚ್ಛಾಯ ಎಳೆಯಲಾಗುತ್ತದೆ. ಫೆ.12 ರಂದು ಸಂಜೆ 5ಕ್ಕೆ ಮಹಾರಥೋತ್ಸವ ಜರುಗಲಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.

ತಾವರಗೇರಾ ಹೋಬಳಿ ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಉಮಣ್ಣ ಬಡಿಗೇರ, ಪ್ರಮುಖರಾದ ಮಲ್ಲಪ್ಪ ಕೊಪ್ಪಳ, ಮಾನಪ್ಪ ಕಮ್ಮಾರ, ಭೀಮಣ್ಣ ಬಡಿಗೇರ, ಸಮುದಾಯದ ಹಿರಿಯರು ಇದ್ದರು.