ತಾವರಗೇರಾದ ಮುರಾರ್ಜಿ ಬಾಲಕರ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಕ್ಷರ ಸಂಭ್ರಮ ಜಾತ್ರೆಯ ಕಾರ್ಯಕ್ರಮಕ್ಕೆ ಮಸ್ಕಿ ಶಾಸಕ ಬಸನಗೌಡ ಪಾಟೀಲ್ ತುರ್ವಿಹಾಳ ಚಾಲನೆ ನೀಡಿದರು. ಜಿಲ್ಲಾ ಸಮನ್ವಯಾಧಿಕಾರಿ ವಿಜಯಲಕ್ಷ್ಮೀ, ನಿವೃತ್ತ ಸೈನಿಕ ಚನ್ನಬಸವಯ್ಯ, ಉಪನ್ಯಾಸಕ ಸುಗೂರೇಶ್ ಹಿರೇಮಠ, ಪ್ರಾಚಾರ್ಯ ಗುರುಪಾದಗೌಡ ಸೂಡಿ, ಪ್ರಭಾರ ನಿಲಯ ಪಾಲಕರ ಮಹಾಂತೇಶ ಗುಜ್ಜಲ ಇತರರಿದ್ದರು. 
ಜಿಲ್ಲೆ

ಜ್ಞಾನದಿಂದ ಅಂಬೇಡ್ಕರ್‌ಹೆಸರುವಾಸಿ

ತಾವರಗೇರಾ: ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳು ಜಾರಿ ಮಾಡುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿದೆ ಎಂದು ಮಸ್ಕಿ ಶಾಸಕ ಬಸನಗೌಡ ಪಾಟೀಲ್ ತುರ್ವಿಹಾಳ ಹೇಳಿದರು.

ಪಟ್ಟಣದ ಮುರಾರ್ಜಿ ದೇಸಾಯಿ ಬಾಲಕರ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ, ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆ ಪ್ರತಿಷ್ಠಾಪನೆ ಹಾಗೂ ಅಕ್ಷರ ಜಾತ್ರಾ ಸಂಭ್ರಮ-2025 ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ವಸತಿ ಶಾಲಾ ಸಾಧನೆ ವಿಶಿಷ್ಟತೆಯಿಂದ ವ್ಯವಸ್ಥಿತವಾಗಿ ಸಾಗಿದೆ. ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂಬೇಡ್ಕರ್ ಜೀವನ ರೋಚಕವಾಗಿದ್ದು, ಜ್ಞಾನದಿಂದಲೇ ಹೆಸರುವಾಸಿಯಾದವರು. ಅಂತಹ ಮಹಾನ್ ನಾಯಕರ ಸ್ಮರಣೆ ಶಾಶ್ವತವಾದದ್ದು ಎಂದರು.

ಜಿಲ್ಲಾ ಸಮನ್ವಯಾಧಿಕಾರಿ ವಿಜಯಲಕ್ಷ್ಮೀ, ನಿವೃತ್ತ ಸೈನಿಕ ಚನ್ನಬಸವಯ್ಯ, ಉಪನ್ಯಾಸಕ ಸುಗೂರೇಶ್ ಹಿರೇಮಠ, ಪ್ರಾಚಾರ್ಯ ಗುರುಪಾದಗೌಡ ಸೂಡಿ, ಶಿಕ್ಷಕರಾದ ನರಸಿಂಗಪ್ಪ, ಅಮರೇಗೌಡ, ಬಸವರಾಜ್.ಬಿ, ಪ್ರಭಾರ ನಿಲಯ ಪಾಲಕರ ಮಹಾಂತೇಶ ಗುಜ್ಜಲ ಪ್ರಮುಖರಾದ ಯಂಕೋಬ ನಾಯಕ್, ಅಶೋಕ ಉಮಲೂಟಿ, ವಿರುಪನಗೌಡ ಜಾಗಿರದಾರ, ವೀರಭದ್ರಗೌಡ ಪಾಟೀಲ್, ಹೇಮಣ್ಣ ಹಾದಿಮನಿ, ಬಾಬು ಹವಾಲ್ದಾರ, ದ್ಯಾಮಣ್ಣ ಹಟ್ಟಿ, ರಾಮಣ್ಣ ತಲೇಖಾನ, ಜೀವರಾಜ, ರವಿ, ಪ್ರಕಾಶ್ ಕುದರಿಮೋತಿ ಇತರರಿದ್ದರು.