ತಾವರಗೇರಾ: ಇಲ್ಲಿನ ಕುಷ್ಟಗಿ ರಸ್ತೆಯ ನಂದಾಪುರ ಕ್ರಾಸ್ ಬಳಿ ಗುರುವಾರ ನಸುಕಿನ ಜಾವ ಬೊಲೆರೊ-ಕಂಕರ್ ವಾಹನ ಡಿಕ್ಕಿಯಾಗಿ ಇಬ್ಬರು ಸಜೀವ ದಹನ ಹೊಂದಿದ್ದಾರೆ.
ಸಮೀಪದ ತೊಡಕಿ ಗ್ರಾಮದ ಸಿದ್ಧಪ್ಪ ಪೊಲೀಸ್ ಪಾಟೀಲ (25) ಮತ್ತು ಆಂಜನೆಪ್ಪ ಪೊಲೀಸ್ ಪಾಟೀಲ(27) ಮೃತರು. ಹಾಲಿನ ಖಾಲಿ ಟ್ರೇಗಳೊಂದಿಗೆ ತೊಡಕಿ ಗ್ರಾಮಕ್ಕೆ ತೆರಳುತ್ತಿದ್ದ ಬೊಲೆರೊ ವಾಹನ ಮತ್ತು ತಾವರಗೇರಾ ಕಡೆಯಿಂದ ಬಂದ ಕಂಕರ್ ಮಿಕ್ಸರ್ ಮಾಡುವ ದೊಡ್ಡ ವಾಹನ ಪರಸ್ಪರ ಡಿಕ್ಕಿಯಾಗಿದೆ.
ಇದರ ಪರಿಣಾಮ ರಸ್ತೆ ಪಕ್ಕದ ತಗ್ಗಿನಲ್ಲಿ ಬೊಲೆರೊ ಬಿದ್ದು, ತಕ್ಷಣವೇ ಬೆಂಕಿ ಹತ್ತಿದೆ. ಒಳಗಿದ್ದ ಸಿದ್ಧಪ್ಪ ಮತ್ತು ಆಂಜನೆಪ್ಪ ಹೊರಬರಲಾಗದೆ ಜೀವಂತ ಸುಟ್ಟುಹೋದರು. ಇವರಿಬ್ಬರ ಮೃತದೇಹಗಳು ಸಂಪೂರ್ಣ ಸುಟ್ಟಿದ್ದು, ಅವುಗಳನ್ನು ಹೊರತರಲು ಕ್ರೇನ್ ಬಳಸಲಾಯಿತು.