ತಾವರಗೇರಾದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಸಿದ್ಧಾರೂಢ ಮಠದ ಶ್ರೀ ಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು. ನಿವೃತ್ತ ಉಪನ್ಯಾಸಕ ಜನಾಬಲಾಲ್ ಹುಸೇನಸಾಬ ಕಂದಗಲ್, ಅಕ್ಸಾದ ಮಸೀದಿ ಅಧ್ಯಕ್ಷ ಜನಾಬ ಫಯಾಜಸಾಬ ಮುಲ್ಲಾ, ಜಮಾತೆ ಇಸ್ಲಾಮಿ ಹಿಂದ್ ಸಂಚಾಲಕ ಜನಾಬ ಮಹಮ್ಮದ್ ರಫಿ ಉಲ್ಲಾ ಇದ್ದರು.  
ಜಿಲ್ಲೆ

ಮೌಲ್ಯಗಳ ಉಳಿವು ಇಂದಿನ ಅಗತ್ಯ

ಕುರುವತ್ತಿ ಶ್ರೀಕಾಂತಪ್ಪ

ತಾವರಗೇರಾ: ಮನುಷ್ಯ ಪಾಪ-ಪುಣ್ಯಗಳ ಅಂತರ ಅರಿಯಬೇಕು. ಪ್ರಸ್ತುತ ಮನುಷ್ಯರಲ್ಲಿ ಮಾನವೀಯತೆ ಮಾರೆಯಾಗುತ್ತಿದೆ ಎಂದು ನಿವೃತ್ತ ಉಪನ್ಯಾಸಕ ಜನಾಬಲಾಲ್ ಹುಸೇನಸಾಬ ಕಂದಗಲ್ ಹೇಳಿದರು.

ಪಟ್ಟಣದ ಮಸೀದಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಸಿವು ಇದ್ದಾಗ ಮತ್ತೊಬ್ಬರಿಗೆ ಅನ್ನ ನೀಡುವುದು ಔದಾರ್ಯ. ರಂಜಾನ್ ಹಬ್ಬದಲ್ಲಿ ಉಪವಾಸ ಬಿಡುವಾಗ ಹಿಂದುಗಳೊಂದಿಗೆ ಊಟ ಮಾಡಿದರೆ ಪುಣ್ಯ ಲಭಿಸುತ್ತದೆ ಎಂದರು.

ಅಕ್ಸಾದ ಮಸೀದಿ ಅಧ್ಯಕ್ಷ ಜನಾಬ ಫಯಾಜಸಾಬ ಮುಲ್ಲಾ, ಸಿದ್ಧಾರೂಢ ಮಠದ ಶ್ರೀ ಕುಮಾರ ಸ್ವಾಮೀಜಿ, ಜಮಾತೆ ಇಸ್ಲಾಮಿ ಹಿಂದ್ ಸಂಚಾಲಕ ಜನಾಬ್ ಮಹಮ್ಮದ್ ರಫಿ ಉಲ್ಲಾ, ಮಹಮ್ಮದ್ ರಫಿ ಇತರರಿದ್ದರು.